VIDEO| ಡ್ರೈವಿಂಗ್ ವೇಳೆ ಸೆಲ್ಫಿ ವಿಡಿಯೋ ಪ್ರಕರಣ‌: ನಟಿ ಸಂಜನಾ ನೀಡಿದ್ದ ನೋಟಿಸ್​ಗೆ ಇಂದು ಬರಲಾಗಲ್ಲ ಎಂದು ಸಂದೇಶ

Sanjana
Published on

ಬೆಂಗಳೂರು: ನಟಿ ಸಂಜನಾ ಗಲ್ರಾನಿ ಡ್ರೈವಿಂಗ್ ವೇಳೆ ಸೆಲ್ಫಿ ವಿಡಿಯೋ ಪ್ರಕರಣ‌ಕ್ಕೆ ಸಂಬಂಧಪಟ್ಟಂತೆ ನೀಡಲಾಗಿದ್ದ ನೋಟಿಸ್​ಗೆ ಉತ್ತರವಾಗಿ ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೇಳಿದ್ದಾರೆ.

ಇಂದು ಹಾಜರಾಗುವಂತೆ ನಟಿ ಸಂಜನಾಗೆ ಬನಶಂಕರಿ ಸಂಚಾರಿ ಪೊಲೀಸರಿಂದ ನೋಟಿಸ್ ನೀಡಲಾಗಿತ್ತು. ಬನಶಂಕರಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಡ್ರೈವಿಂಗ್ ಮಾಡಿ ಸೆಲ್ಫಿ ಮಾಡಿದ್ದ ನಟಿಗೆ ನೋಟಿಸ್​ ನೀಡಲಾಗಿತ್ತು.

ಶೂಟಿಂಗ್ ಹಿನ್ನೆಲೆಯಲ್ಲಿ ದುಬೈಗೆ ಸಂಜನಾ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬಂದ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ಸಂದೇಶ ಕಳುಹಿಸಿದ್ದಾರೆ.

ಸಂಜನಾ ವಾಹನ ಚಲಾಯಿಸುವಾಗ ಮಾಡಿದ್ದ ಸೆಲ್ಫಿ ವೀಡಿಯೋ ಸಾಮಾಜಿಕ ತಾಲಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬನಶಂಕರಿ ಸಂಚಾರಿ ಪೊಲೀಸರು, ಈ ಬಗ್ಗೆ ಸ್ಪಷ್ಟನೆ ಕೇಳಿ ನೋಟಿಸ್ ನೀಡಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net