ಬಂಧನ-2 ಇಂದು ಆರಂಭ; ಇಂಥ ಸಾಹಸ ಇದೇ ಮೊದಲು..

Flash Back
Published on

ಕನ್ನಡ ಚಿತ್ರರಂಗದ ಕ್ಲಾಸಿಕ್ ಚಿತ್ರಗಳಲ್ಲೊಂದಾದ ‘ಬಂಧನ’ದ ಮುಂದುವರಿದ ಭಾಗವಾದ ‘ಬಂಧನ 2’ ಇಂದು (ಡಿ.10) ಪ್ರಾರಂಭವಾಗುತ್ತಿದೆ. ಚಿತ್ರವೊಂದು ಬಿಡುಗಡೆಯಾಗಿ 37 ವರ್ಷಗಳ ನಂತರ ಅದರ ಮುಂದುವರಿದ ಭಾಗ ಶುರುವಾಗಿರುವುದು, ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು. ವಿಶೇಷವೆಂದರೆ, ಮೂಲ ಚಿತ್ರದಲ್ಲಿ ನಟಿಸಿದ್ದ ಸುಹಾಸಿನಿ ಮತ್ತು ಜೈಜಗದೀಶ್ ಈ ಚಿತ್ರದಲ್ಲೂ ನಟಿಸುತ್ತಿರುವುದು, ರಾಜೇಂದ್ರ ಸಿಂಗ್ ಬಾಬು ಅವರೇ ನಿರ್ದೇಶಿಸುತ್ತಿರುವುದು ಒಂದು ಹೆಗ್ಗಳಿಕೆ.

ಈ ಚಿತ್ರವು ಉಷಾ ನವರತ್ನರಾಂ ಅವರ ಜನಪ್ರಿಯ ಕಾದಂಬರಿಯನ್ನಾಧರಿಸಿದ್ದು, ಈ ಕಾದಂಬರಿಯ ಹಕ್ಕುಗಳು ಮುಂಚೆ ದಿವಂಗತ ನಟಿ ಕಲ್ಪನಾ ಅವರ ಬಳಿ ಇತ್ತಂತೆ. ಆ ಹಕ್ಕುಗಳನ್ನು ಅವರಿಂದ ಪಡೆದ ಬಾಬು, ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದಲ್ಲಿ ಚಿತ್ರ ಮಾಡಿದ್ದಾರೆ. ಚಿತ್ರದ ಮೊದಲ ದೃಶ್ಯಕ್ಕೆ ಪುಟ್ಟಣ್ಣ ಕಣಗಾಲ್ ಅವರು ಕ್ಲಾಪ್ ಮಾಡಿದ್ದು ವಿಶೇಷ. ಈ ಚಿತ್ರಕ್ಕಾಗಿ 83 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ಆ ಕಾಲಕ್ಕೆ 27 ಲಕ್ಷ ಬಜೆಟ್ ಆಗಿತ್ತಂತೆ. ಚಿತ್ರ ನೋಡಿದ ವಿತರಕರು, ಈ ಚಿತ್ರ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದ್ದರಂತೆ. ಆದರೆ, ಅದನ್ನು ಸುಳ್ಳು ಮಾಡಿ 25 ಕೇಂದ್ರಗಳಲ್ಲಿ ‘ಬಂಧನ’ 25 ವಾರ ಪ್ರದರ್ಶನ ಕಂಡಿದ್ದು ದಾಖಲೆಯೇ ಸರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net