ಅಂದಹಾಗೆ, 'ಎನ್‌ಬಿಕೆ 107' ಚಿತ್ರತಂಡ ಫೆಬ್ರವರಿ 22 ರಂದು ಮುಂಜಾನೆ ಬಾಲಯ್ಯ ಅವರ ಈ ಸಿನಿಮಾದ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ್ದು, ಅದಕ್ಕೆ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಚಿತ್ರದಲ್ಲಿನ ಬಾಲಕೃಷ್ಣ ಅವರ ಮೊದಲ ಲುಕ್, 2017 ರಲ್ಲಿ ರಿಲೀಸ್ ಆದ ಕನ್ನಡ ಚಿತ್ರ 'ಮಫ್ತಿ' ಯಲ್ಲಿನ ನಟ ಶಿವ ರಾಜ್‌ಕುಮಾರ್ ಅವರ ಒಂದು ಲುಕ್ ಅನ್ನು ಹೋಲುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗುತ್ತಿದೆ.