ಹೌದು, ಡಾರ್ಲಿಂಗ್ ಪ್ರಭಾಸ್, ಪ್ರಿನ್ಸ್ ಮಹೇಶ್ ಬಾಬು, ಬಾಹುಬಲಿ ನಿರ್ದೇಶಕ ರಾಜಮೌಳಿ, ಹೀಗೆ ಹಲವರನ್ನು ತಮ್ಮ ಜತೆಗೆ ಕರೆದುಕೊಂಡು ಹೋಗಿ ಸಿಎಂ ಜಗನ್ ಜತೆಗೆ ಮಾತುಕತೆ ನಡೆಸಿದರು ಚಿರಂಜೀವಿ. ಈ ಮೂರನೇ ಸುತ್ತಿನ ಮಾತುಕತೆ ನಡೆಸುವಾಗ ತೆಲುಗಿನ ಗಣ್ಯ ನಟರಿಗೆ ಚಿರಂಜೀವಿ ಆಹ್ವಾನ ನೀಡಿದ್ದರು. ನಟ ಬಾಲಕೃಷ್ಣ ಅವರಿಗೂ ಆಹ್ವಾನ ನೀಡಲಾಯಿತು. ಆದರೆ ಬಾಲಕೃಷ್ಣ ಹೋಗಿರಲಿಲ್ಲ. ನಟ ಬಾಲಕೃಷ್ಣ ಯಾಕೆ ಹೋಗಿಲ್ಲ ಎಂಬುದರ ಬಗ್ಗೆ ಹಲವರಿಗೆ ಕುತೂಹಲವಿತ್ತು. ಇನ್ನು, ಈಗ ಆ ಕುತೂಹಲಕ್ಕೆ ಬಾಲಯ್ಯ ಅವರೇ ಬಹಿರಂಗವಾಗಿ ಮಾತಾಡಿ ಅವರ ದಿಟ್ಟ ಉತ್ತರವ್ನನು ಎಲ್ಲರಿಗೂ ತಿಳಿಸಿದ್ದಾರೆ. ''ಜಗನ್ ಜೊತೆ ನಡೆಯುವ ಸಭೆಗೆ ನನಗೆ ಆಹ್ವಾನ ನೀಡಲಾಗಿತ್ತು. ಆದರೆ ನಾನು ಹೋಗಲು ನಿರಾಕರಿಸಿದೆ'' ಎಂದು ಹೇಳಿದ್ದಾರೆ. ಅಂದಹಾಗೆ, ಆಂಧ್ರದ ಬಸವತಾರಕಂ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಬಾಲಯ್ಯ ಅವರು, ''ಇನ್ನು, ಮುಂದೆಯೂ ನಾನು ಜಗನ್ ಅನ್ನು ಯಾವುದೇ ಕಾರಣಕ್ಕೂ ಭೇಟಿ ಆಗುವುದಿಲ್ಲ.