ಟಾಕಿ ಮುಗಿಸಿದ 'ಬೈರಾಗಿ' ... ಇನ್ನು ಹಾಡುಗಳಷ್ಟೇ ಬಾಕಿ ...

Bhairagi - Final
Published on

ಬೆಂಗಳೂರು: ಶಿವರಾಜಕುಮಾರ್ ಅಭಿನಯದ 123ನೇ ಸಿನಿಮಾ 'ಬೈರಾಗಿ'ಯ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಹಾಡಿನ ಚಿತ್ರೀಕರಣಕ್ಕೆ ಸದ್ಯದಲ್ಲೇ ಮೈಸೂರಿಗೆ 'ಬೈರಾಗಿ' ತಂಡ ತೆರಳಲಿದೆ.

ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್ ಮಿಲ್ಟನ್ 'ಬೈರಾಗಿ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ತಮಿಳಿನಲ್ಲಿ ಅವರೇ ನಿರ್ದೇಶನ ಮಾಡಿದ್ದ 'ಕಡುಗು' ಎಂಬ ಚಿತ್ರದ ರೀಮೇಕ್​ ಇದು. ಮೂಲ ಚಿತ್ರದಲ್ಲಿ ಭರತ್​, ರಾಜಕುಮಾರನ್​ ಮುಂತಾದವರು ನಟಿಸಿದ್ದರು. ಈ ಚಿತ್ರದ ವಿಶೇಷತೆ ಎಂದರೆ, 'ಟಗರು' ಯಶಸ್ಸಿನ ಬಳಿಕ ಶಿವರಾಜಕುಮಾರ್ ಹಾಗೂ 'ಡಾಲಿ' ಧನಂಜಯ್ ಒಟ್ಟಿಗೆ ನಟಿಸಿರುವುದು. ಜತೆಗೆ ಅಂಜಲಿ, 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್, ಹಿರಿಯ ನಟ ಶಶಿಕುಮಾರ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.

ಈ ಚಿತ್ರದಲ್ಲಿ ಶಿವಣ್ಣ ನಾನಾ ಅವತಾರ ಎತ್ತಿದ್ದಾರೆ. ಅವರ ಹುಟ್ಟು ಹಬ್ಬದಂದು ಬಿಡುಗಡೆಯಾದ ಟೈಟಲ್ ಟೀಸರ್ ಎಲ್ಲರಿಗೂ ಮೆಚ್ಚುಗೆಯಾಗಿದ್ದು. ಅನೂಪ್ ಸೀಳಿನ್ ಅವರ ಹಿನ್ನೆಲೆ ಸಂಗೀತದ ಬಗ್ಗೆಯೂ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net