ಒಂದು ಭ್ರಮೆಯ ಸುತ್ತ: ಡೆಲಿರಿಯಂ ಕುರಿತು ‘ಬಹುಕೃತ ವೇಷಂ’

bahukrutha
Published on

ಬೆಂಗಳೂರು: ಮನೋರೋಗವನ್ನೇ ಪ್ರಧಾನವಾಗಿರಿಸಿಕೊಂಡು ಮೂಡಿಬಂದಿರುವ ಸಿನಿಮಾ "ಬಹುಕೃತ ವೇಷಂ'. ಈ ಚಿತ್ರದ ಕಥಾನಾಯಕನಿಗೆ ಡೆಲಿರಿಯಂ ಎಂಬ ವಿಚಿತ್ರ ಕಾಯಿಲೆ. ಹಿಂದೆ ಯಾರೋ ಇದ್ದಾರೆ, ಫಾಲೋ ಮಾಡುತ್ತಿದ್ದಾರೆ, ಏನೋ ಮಾಡಿಬಿಡುತ್ತಾರೆ ಎಂಬ ಭ್ರಮೆ ಅವನನ್ನು ಕಾಡುತ್ತಿರುತ್ತದೆ. ಈಗಾಗಲೇ ಚಿತ್ರ ಸಂಪೂರ್ಣವಾಗಿದ್ದು, ಫೆ. 18ಕ್ಕೆ ಬಿಡುಗಡೆಯಾಗುತ್ತಿದೆ.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದ ಅಧ್ಯಾಯ್​ ರಾಜ್​ ಹೇಳುವಂತೆ, "ನಮ್ಮ ಸ್ನೇಹಿತನ ಸ್ನೇಹಿತನಿಗೆ ಇಂಥದ್ದೊಂದು ಕಾಯಿಲೆ ಇದೆ ಎಂಬುದು ಗೊತ್ತಾಯಿತು. ತಡಮಾಡದೇ ಅದನ್ನೇ ನಾಯಕ ಶಶಿಕಾಂತ್​ಗೂ ಹೇಳಿದೆ. ಅಲ್ಲಿಂದ ಕಥೆಯ ಎಳೆ ಬಿಚ್ಚಿಕೊಳ್ಳುತ್ತ ಬಂತು. ಪ್ರೇಕ್ಷಕ ಬಯಸುವ ಪ್ರೀತಿ, ಸಾಹಸ, ಐಟಂ ಡಾನ್ಸ್​ ಎಲ್ಲವನ್ನೂ ಬೆರೆಸಿ ಕಮಷಿರ್ಯಲ್​ ಸಿನಿಮಾ ಮಾಡಿದ್ದೇವೆ. ಪ್ರಶಾಂತ್​ ಎಳ್ಳಂಪಳ್ಳಿ ನಿರ್ದೇಶನ ಮಾಡಿದ್ದಾರೆ' ಎಂದು ಕಥೆ ಹುಟ್ಟಿದ ಬಗೆಯನ್ನು ವಿವರಿಸುತ್ತಾರೆ.

ಹೊಸಬರ ಈ ತಂಡದಲ್ಲಿ ನಾಯಕಿಯಾಗಿ ನಟಿಸಿರುವ "ಅಗ್ನಿ ಸಾ' ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಚಿತ್ರ ಮತ್ತು ಪಾತ್ರದ ಬಗ್ಗೆ ತುಂಬ ಭರವಸೆ ಇಟ್ಟುಕೊಂಡಿದ್ದಾರೆ. "ಸಮಾಜದಲ್ಲಿ ಎಲ್ಲರೂ ಒಂದೊಂದು ವೇಷ ಹಾಕಿ ಬದುಕುತ್ತಿರುತ್ತಾರೆ. ಒಂದೊಂದು ರೀತಿಯಲ್ಲಿ ವತಿರ್ಸುತ್ತಿರುತ್ತಾರೆ. ಇಲ್ಲಿ ನನ್ನದೂ ಒಂದು ವಿಶೇಷ ಪಾತ್ರ. ಕ್ಲೆಮ್ಯಾಕ್ಸ್​ಗೂ ಮುನ್ನ ನಾಲ್ಕೂವರೆ ನಿಮಿಷದ ಸಿಂಗಲ್​ ಶಾಟ್​ನಲ್ಲಿ ಸೆರೆಹಿಡಿದ ಸನ್ನಿವೇಷ ಚಿತ್ರದ ಹೈಲೈಟ್​' ಎಂದರು.

ಚಿತ್ರದ ನಾಯಕ ಶಶಿಕಾಂತ್​ ಮಾತನಾಡಿ, "ಅತಿಷಯ್​ ಎಂಬ ಯುವಕನ ಪಾತ್ರ ಮಾಡಿದ್ದೇನೆ. ಡೆಲಿರಿಯಂ ಅನ್ನೋ ಕಾಯಿಲೆ ಅವನ ಜೀವನಕ್ಕೆ ಏನೆಲ್ಲ ಅಪಾಯವನ್ನು ತಂದಿಡುತ್ತದೆ ಎಂಬುದನ್ನು ಸಿನಿಮಾದಲ್ಲಿ ಹೇಳಿದ್ದೇವೆ. ನೋಡಿ ಹರಸಿ' ಎಂದರು. ಚಿತ್ರವನ್ನು ಡಿ.ಕೆ ರವಿ ನಿಮಿರ್ಸಿದ್ದಾರೆ. ಹರ್ಷ ಛಾಯಾಗ್ರಹಣ, ವೈಶಾಕ್​ ಭಾರ್ಗವ್​ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net