

ಬೆಂಗಳೂರು: ‘ಡಾಲಿ’ ಧನಂಜಯ ಇದೀಗ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದಾರೆ. ‘ಸಲಗ’ ಚಿತ್ರ ಇದೇ 14ರಂದು ತೆರೆಗೆ ಬಂದರೆ, ಮುಂದಿನ ಒಂದು ವಾರದಲ್ಲಿ ಅಂದರೆ 22ರಂದು ‘ರತ್ನನ್ ಪ್ರಪಂಚ’ ಸಿನಿಮಾ ನೇರವಾಗಿ ಅಮೆಜಾನ್ ಪ್ರೖೆಮ್ಲ್ಲಿ ಪ್ರಸಾರವಾಗಲಿದೆ. ಈ ನಡುವೆ ‘ಬಡವ ರಾಸ್ಕಲ್’ ಚಿತ್ರದ ರಿಲೀಸ್ ದಿನಾಂಕವನ್ನೂ ಘೋಷಿಸಿದ್ದಾರೆ ಧನಂಜಯ. ಈ ಚಿತ್ರ ಡಿಸೆಂಬರ್ 24ರ ಕ್ರಿಸ್ವುಸ್ ಹಬ್ಬದ ಪ್ರಯುಕ್ತ ದೊಡ್ಡ ಪರದೆಯಲ್ಲಿ ಬಿಡುಗಡೆ ಆಗಲಿದೆ.
ಡಾಲಿ ಪಿಕ್ಚರ್ಸ್ನಡಿ ಧನಂಜಯ ಮತ್ತು ಸಾವಿತ್ರಮ್ಮ ಅಡವಿಸ್ವಾಮಿ ನಿರ್ವಿುಸಿರುವ ಈ ಚಿತ್ರವನ್ನು ಶಂಕರ್ ಗುರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸಿದ್ದು, ನಾಗಭೂಷಣ್ ಪ್ರಮುಖ ಪಾತ್ರದಲ್ಲಿದ್ದಾರೆ. ವಿಶೇಷ ಏನೆಂದರೆ, ಬಡವ ರಾಸ್ಕಲ್ ತೆರೆಕಂಡ ಒಂದು ವಾರದ (ಡಿ. 31) ಬಳಿಕ ರಕ್ಷಿತ್ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.