ಬಡವ ರಾಸ್ಕಲ್ ಚಿತ್ರದ ಭರ್ಜರಿ ಕಲೆಕ್ಷನ್ ಎಷ್ಟು? ಡಾಲಿ ಧನಂಜಯ್ ತಂಡ ದಿಲ್ ಖುಷ್!

Published on

ನಟ ರಾಕ್ಷಸ ಡಾಲಿ ಧನಂಜಯ್ ಅವರು ನಟಸಿ ಜೊತೆಗೆ ಮೊದಲ ಬಾರಿ ನಿರ್ಮಿಸಿದ ಸಿನಿಮಾ 'ಬಡವ ರಾಸ್ಕಲ್' ಡಿ. 24ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ 'ಬಡವ ರಾಸ್ಕಲ್' ಯಶಸ್ವಿಯಾಗಿದೆ ಎಂದೇ ಹೇಳಬೇಕು. ನಿರ್ದೇಶಕ ಶಂಕರ್ ಗುರು ಅವರು ಒಂದೊಳ್ಳೆ ಮದ್ಯಮ ವರ್ಗ ಕುಟುಂಬದ ಸಂಕಷ್ಟಗಳನ್ನು ಕುರಿತ ಈ ಸಿನಿಮಾವನ್ನು ತುಂಬಾ ಚೆನ್ನಾಗಿ ತೆಗೆದಿದ್ದಾರೆ ಎಂಬ ಪ್ರತಿಕ್ರಿಯೆ ಸಹ ಗಿಟ್ಟಿಸಿಕೊಂಡಿದೆ. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಬಹುತೇಕ ಎಲ್ಲಾ ಕನ್ನಡ ಸಿನಿಮಾಗಳಿಗಿಂತ ಉತ್ತಮ ಚಿತ್ರ ಎನಿಸಿಕೊಂಡಿದ್ದು, ಇದೀಗ ಕಲೆಕ್ಷನ್ ವಿಚಾರದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸದ್ಯ, ಗಾಂಧಿ ನಗರದಲ್ಲಿ ಸೂಪರ್ ಹಿಟ್ ಆಗಿರುವ 'ಬಡವ ರಾಸ್ಕಲ್' ಸಿನಿಮಾದ ಕಲೆಕ್ಷನ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ.

ಸಿನಿಮಾ 15 ಕೋಟಿ ರೂ. ಗೂ ಅಧಿಕ ಮೊತ್ತ ಗಳಿಸಿದೆ ಎನ್ನಲಾಗಿದೆ. ಈ ವಿಷಯದ ಕುರಿತು ಮಾಧ್ಯಮಗಳ ಜತೆ ಮಾತಾಡಿದ ನಟ ಡಾಲಿ ಧನಂಜಯ್, 'ಚಿತ್ರದ ಕಲೆಕ್ಷನ್ ಬಗ್ಗೆ ಇನ್ನೂ ಪೂರ್ತಿ ಮಾಹಿತಿ ಇಲ್ಲ. ಒಂದು ವೇಳೆ 15 ಕೋಟಿ ಕಲೆಕ್ಷನ್ ಆಗಿದ್ದರೇ, ನಾನು ಹೆಲಿಕಾಪ್ಟರ್​ನಲ್ಲಿ ಇಡೀ ರಾಜ್ಯದ ಪ್ರವಾಸ ಮಾಡಿ ಅಭಿಮಾನಿಗಳಿಗೆ ಧನ್ಯವಾದಗಳು ತಿಳಿಸುತ್ತೇನೆ. ಸದ್ಯ, ಸಿನಿಮಾಗೆ ಮಾತ್ರ ಪ್ರೇಕ್ಷಕರಿಂದ ಒಳ್ಳೆಯ ಆಧರಣೆ ಸಿಕ್ಕಿದೆ' ಎಂದು ತಿಳಿಸಿದ್ದಾರೆ. ಈಗಾಗಲೇ, ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ ಕಾರಣ, ರಾಜ್ಯದ ಬಹಳಷ್ಟು ಕಡೆ 'ಬಡವ ರಾಸ್ಕಲ್' ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಭೇಟಿಯಾಗಿ ಡಾಲಿ ಧನಂಜಯ್ ಅವರು ಧನ್ಯವಾದಗಳನ್ನು ತಿಳಿಸುತ್ತಾ ಬಂದಿದ್ದಾರೆ. ಬೆಳಗಾವಿಯಲ್ಲಿಯೂ ಸಂಭ್ರಮಾಚರಣೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net