ಮಾಫಿಯಾ ಕಥೆಯಲ್ಲಿ ಧನ್ವೀರ್ ಗೌಡ! 3ನೇ ಸಿನಿಮಾಗೆ ರೆಡಿಯಾದ ಬಜಾರ್ ಹೀರೋ...

Published on

ಬಜಾರ್ ಹೀರೋ ನಟ ಧನ್ವೀರ್ ಗೌಡ ತಮ್ಮ ಮೂರನೇ ಸಿನಿಮಾಗೆ ರೆಡಿಯಾಗಿದ್ದಾರೆ. ಧನ್ವೀರ್ ಗೌಡ ತಮ್ಮ ಮೊದಲ ಸಿನಿಮಾ 'ಬಜಾರ್‌' ಮೂಲಕವೇ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದು,‌ ಯಶಸ್ಸು ಕಂಡಿದ್ದಾರೆ. ಇನ್ನು, ನಟನ ಎರಡನೇ 'ಬೈ ಟು ಲವ್' ಸಿನಿಮಾ ಶೂಟಿಂಗ್ ಮುಗಿಸಿದ್ದು ರಿಲೀಸ್​ಗೆ ರೆಡಿಯಾಗುತ್ತಿದೆ. ಆದರೆ, ಅಷ್ಟರೊಳಗೆ ಧನ್ವೀರ್ ತಮ್ಮ ಮೂರನೇ ಸಿನಿಮಾ ಶೂಟಿಂಗ್​ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಅಂದಹಾಗೆ, ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿ ಒಂದಿಷ್ಟು ಗುರುತಿಸಿಕೊಂಡಿರುವ ಶಂಕರ್ ರಾಮನ್, ಧನ್ವೀರ್ ಅವರ ಈ ಮೂರನೇ ಸಿನಿಮಾಗೆ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಸಿನಿಮಾರಂಗದಲ್ಲಿ ತಾವು 13 ವರ್ಷಗಳಲ್ಲಿ ಪಡೆದ ಅನುಭವವನ್ನೂ ಈ ಸಿನಿಮಾದಲ್ಲಿ ಬಳಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. ಈ ಸಿನಿಮಾ ಒಂದು ಮಾಫಿಯಾ ಲೋಕದ ಕಥೆಯಾಗಿದೆ. ಚಿತ್ರದಲ್ಲಿ ಆಕ್ಷನ್ ಮತ್ತು ಎಂಟರ್ ಟೈನ್ಮೆಂಟ್ ಎಂಬ ಎರಡು ಅಂಶಗಳು ಸಮವಾಗಿ ಸಿನಿ ಪ್ರೇಕ್ಷಕರನ್ನು ರಂಜಿಸಲಿದೆಯಂತೆ.

ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ಸ್ ಪ್ರೊಡಕ್ಷನ್ ಅಡಿ ಧನ್ವೀರ್ ಅವರ ಈ ಮೂರನೇ ಸಿನಿಮಾವನ್ನು ಚೇತನ್ ಕುಮಾರ್ ಗೌಡ ನಿರ್ಮಿಸಲಿದ್ದು, ಜನವರಿ 14 ರಂದು ಮಧ್ಯಹ್ನ 2:30ಕ್ಕೆ ಈ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣಗೊಳ್ಳಲಿದೆ ಎಂಬ ಮಾಹತಿ ಚಿತ್ರತಂಡದಿಂದ ಲಭ್ಯವಾಗಿದೆ. ಇನ್ನೂ, 'ಬಂಪರ್' ಎಂಬ ಒಂದು ಚಿತ್ರದ ಕೆಲಸಕ್ಕೆ ನಟ ಧನ್ವೀರ್ ಗೌಡ ಬ್ರೇಕ್ ಹಾಕಿದ್ದಾರೆ. 'ಬಂಪರ್' ಚಿತ್ರ ಕುರಿತು ಹೆಚ್ಚು ಮಾಹಿತಿಗೆ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net