ರೋಚಕ ರೋಚಿತ್ ; ಹಾರ್ಡ್‌ಕೋರ್ ಕ್ರಿಮಿನಲ್ ಪಾತ್ರದಲ್ಲಿ ಗೆದ್ದ ಸಾಫ್ಟ್​ವೇರ್​ ಹುಡುಗ

Rochith (1)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

‘ಬ್ಯಾಡ್ ಮ್ಯಾನರ್ಸ್‌’ ಚಿತ್ರದಲ್ಲಿ ಮಗಾಯ್ ಎಂಬ ಹಾರ್ಡ್‌ಕೋರ್ ಕ್ರಿಮಿನಲ್ ಪಾತ್ರದ ಮೂಲಕ ಗಮನ ಸೆಳೆದ ನಟ ರೋಚಿತ್. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ದುನಿಯಾ ಸೂರಿ ನಿರ್ದೇಶನ, ಅಭಿಷೇಕ್ ಅಂಬರೀಷ್ ನಾಯಕನಾಗಿ ನಟಿಸಿದ್ದ ‘ಬ್ಯಾಡ್ ಮ್ಯಾನರ್ಸ್‌’ನಲ್ಲಿ ಖಳನಾಯಕನಾಗಿ ಮಿಂಚುವ ಮುನ್ನ ರೋಚಿತ್, ನೃತ್ಯನಿರ್ದೇಶಕ ಇಮ್ರಾನ್ ಸರ್ದಾರಿಯಾ ಆ್ಯಕ್ಷನ್-ಕಟ್ ಹೇಳಿದ್ದ ‘ಉಪ್ಪು ಹುಳಿ ಖಾರ’ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ಇದೀಗ ವಿಲನ್ ಆದ ಬಳಿಕ ಅವರಿಗೆ ಬೇಡಿಕೆ ಹೆಚ್ಚಿದೆ. ‘ನಾನು ಬೆಂಗಳೂರಿನ ಹುಡುಗ. ಮೊದಲಿಂದಲೂ ನಟನಾಗುವ ಆಸೆಯಿತ್ತು. ಹೀಗಾಗಿ ಸ್‌ಟಾವೇರ್ ಇಂಜಿನಿಯರಿಂಗ್ ಪೂರ್ಣಗೊಳಿಸಿ ಕಲಾಗಂಗೋತ್ರಿಯಲ್ಲಿ ಮೂರು ವರ್ಷಗಳ ಕಾಲ ರಂಗಭೂಮಿ ಅನುಭವ ಪಡೆದೆ. ಅದೇ ಸಮಯದಲ್ಲಿ ‘ಓಂ ಶಕ್ತಿ, ಓಂ ಶಾಂತಿ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆಯಿತು. ಜತೆಗೆ ಇಮ್ರಾನ್ ಸರ್ದಾರಿಯಾ ಸರ್ ಸಿನಿಮಾದಲ್ಲೂ ನಟಿಸಿದೆ’ ಎಂದು ಹೇಳಿಕೊಳ್ಳುತ್ತಾರೆ.

ಇನ್ನೂ ಪ್ರೂವ್ ಮಾಡಿಕೊಳ್ಳಬೇಕಿದೆ…
ನಾಯಕನಾಗಿ, ಖಳನಾಯಕನಾಗಿ ನಟಿಸಿದ್ದರೂ ರೋಚಿತ್ ‘ನಾನಿನ್ನೂ ಪ್ರೂವ್ ಮಾಡಿಕೊಳ್ಳಬೇಕಿದೆ’ ಎನ್ನುತ್ತಾರೆ. ‘ಉತ್ತಮ ನಟನಾಗಿ ಗುರುತಿಸಿಕೊಳ್ಳಬೇಕು ಎಂಬುದು ನನ್ನ ಆಸೆ. ನಾನೇನು ಎಂಬುದನ್ನು ಇನ್ನೂ ಪ್ರೂವ್ ಮಾಡಿಲ್ಲ. ನನ್ನಲ್ಲಿ ಇನ್ನೂ ಸಾಮರ್ಥ್ಯವಿದೆ ಎಂಬುದನ್ನು ಪ್ರೂವ್ ಮಾಡಿಕೊಳ್ಳಬೇಕು. ಹೀಗಾಗಿ ಯಾವುದೇ ಪಾತ್ರಕ್ಕೂ ನಾನು ಸಿದ್ದ. ಈಗ ನಾಯಕ, ಖಳನಾಯಕ ಎರಡೂ ರೀತಿಯ ಪಾತ್ರಗಳಲ್ಲಿ ಅವಕಾಶಗಳು ಬರುತ್ತಿವೆ. ಆದರೆ, ರ್ಪಾಮೆನ್ಸ್‌ಗೆ ಆದ್ಯತೆಯಿರುವ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ’ ಎನ್ನುತ್ತಾರೆ.

ಬಾಲಿವುಡ್‌ನಲ್ಲೂ ಕನ್ನಡಿಗನ ಮಿಂಚು
ಕನ್ನಡದ ಜತೆ ಬಾಲಿವುಡ್ ಚಿತ್ರದಲ್ಲೂ ರೋಚಿತ್ ನಟಿಸಿದ್ದಾರೆ. ‘ಸೂಸಿ ಗಣೇಶನ್ ನಿರ್ದೇಶನದ, ‘ಗಾಳಿಪಟ 2’ ನಿರ್ಮಾಪಕ ರಮೇಶ್ ರೆಡ್ಡಿ ನಿರ್ಮಿಸಿರುವ ‘ದಿಲ್ ಹೈ ಗ್ರೇ’ ಚಿತ್ರದಲ್ಲೂ ನಟಿಸಿದ್ದೇನೆ. ವಿನೀತ್ ಕುಮಾರ್, ಊರ್ವಶಿ ರೌಟೆಲಾ, ಅಕ್ಷಯ್ ಓಬೆರಾಯ್ ಜತೆ ನಾನೂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದೇನೆ. ಆ ಸಿನಿಮಾ ರಿಲೀಸ್‌ಗೆ ರೆಡಿಯಿದೆ’ ಎಂದು ಮಾಹಿತಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net