ಗೇಮ್ ಆಫ್ ಥ್ರೋನ್ಸ್​​​ನಲ್ಲಿ ನಟಿಸಿದ್ದ ನಟ, ಡ್ಯಾರೆನ್ ಕೆಂಟ್ 36 ನೇ ವಯಸ್ಸಿನಲ್ಲಿ ವಿಧಿವಶ

d1
Published on

ಗೇಮ್ ಆಫ್ ಥ್ರೋನ್ಸ್​​ನಲ್ಲಿ ನಟಿಸಿದ್ದ ನಟ, ಬರಹಗಾರ ಮತ್ತು ನಿರ್ದೇಶಕರಾದ ಡ್ಯಾರೆನ್ ಕೆಂಟ್ 36 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ ಎಂದು ವರದಿಯಾಗಿದೆ. ಕೆಂಟ್ ಈ ವರ್ಷದ ಆರಂಭದಲ್ಲಿ ಸಿನಿಮಾದಲ್ಲಿ ಬಿಡುಗಡೆಯಾದ ಡಂಜಿಯನ್ಸ್ ಮತ್ತು ಡ್ರಾಗನ್ಸ್ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದರು.\


ಡ್ಯಾರೆನ್ ಸಾವಿಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಆದರೆ ಟ್ಯಾಲೆಂಟ್ ಏಜೆನ್ಸಿ ಕ್ಯಾರಿ ಡಾಡ್ ಅಸೋಸಿಯೇಟ್ಸಿ ಅವರು ಮರಣಹೊಂದಿರುವುದನ್ನು ಫೇಸ್‌ಬುಕ್‌ನಲ್ಲಿ ದೃಢಪಡಿಸಿದ್ದು, ನಮ್ಮ ಆತ್ಮೀಯ ಸ್ನೇಹಿತ ಮತ್ತು ಕ್ಲೈಂಟ್ ಡ್ಯಾರೆನ್ ಕೆಂಟ್ ಶಾಂತಿಯುತವಾಗಿ ನಿಧನರಾದರು ಎಂದು ನಾವು ನಿಮಗೆ ತೀವ್ರ ದುಃಖದಿಂದ ಹೇಳಬೇಕಾಗಿದೆ ಎಂದು ಪೋಸ್ಟ್ ಮೂಲಕ ಬರೆದುಕೊಂಡಿದೆ.


ಕೀಫರ್ ಸದರ್ಲ್ಯಾಂಡ್ ನಟಿಸಿದ 2008 ರ ಭಯಾನಕ ಚಲನಚಿತ್ರ ಮಿರರ್ಸ್‌ನಲ್ಲಿ ತಮ್ಮ ಮೊದಲ ನಟನಾ ಪಾತ್ರವನ್ನು ಮಾಡಿದರು.2018 ರಲ್ಲಿ, ರೂಮ್ ನಿರ್ದೇಶಕ ಲೆನ್ನಿ ಅಬ್ರಹಾಂಸನ್ ಅವರ ಡೊಮ್ನಾಲ್ ಗ್ಲೀಸನ್ ಮತ್ತು ರುತ್ ವಿಲ್ಸನ್ ನಟಿಸಿದ ಗೋಥಿಕ್ ಚಿಲ್ಲರ್ ದಿ ಲಿಟಲ್ ಸ್ಟ್ರೇಂಜರ್‌ನಲ್ಲಿ ನಟ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆ.
ಡ್ಯಾರೆನ್ ಕೆಂಟ್ ಗೌರವಾರ್ಥ ನಿರ್ದೇಶಕರಾದ ಜೇನ್ ಗುಲ್ ಕೂಡ ಟ್ವಿಟರ್‌ನಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದು, ನಿಮ್ಮ ಸ್ನೇಹಿತರಾಗಿರುವುದು ಹಾಗೂ ನಿಮ್ಮೊಂದಿಗೆ ಕೆಲಸ ಮಾಡಿರುವುದು ನಿಜಕ್ಕೂ ಸೌಭಾಗ್ಯವಾಗಿದೆ.


ಇನ್ನೂ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಬೇಕಿತ್ತು. ಇನ್ನು ಮುಂದೆ ಜೀವನ ಈ ಹಿಂದಿನಂತೆ ಇರಲಾರದು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಅಂತಿಮ ವಿದಾಯ ಡ್ಯಾರೆನ್ ಕೆಂಟ್ ಎಂದು ಬರೆದುಕೊಂಡಿದ್ದಾರೆ.


ಪ್ರಶಸ್ತಿ ವಿಜೇತ ಬರಹಗಾರ ಮತ್ತು ನಿರ್ದೇಶಕರಾಗಿದ್ದ ಡ್ಯಾರೆನ್, 2021 ರಲ್ಲಿ ಕಿರುಚಿತ್ರ ಯು ನೋ ಮಿ ಅನ್ನು ನಿರ್ದೇಶಿಸಿದರು. ಚಿತ್ರಕ್ಕಾಗಿ ಅವರನ್ನು ಜನವರಿ ಪ್ರಶಸ್ತಿಯ ಮೂಲಕ ಗೌರವಿಸಲಾಯಿತು.


ಡ್ಯಾರೆನ್ ಕೆಂಟ್ ಆಗ್ನೇಯ ಇಂಗ್ಲೆಂಡ್‌ನ ಎಸೆಕ್ಸ್‌ನಲ್ಲಿ ಹುಟ್ಟಿ ಬೆಳೆದರು. ಅವರು ನಟಿಸಿದ ಇತರ ಕೆಲವು ಚಲನಚಿತ್ರಗಳೆಂದರೆ ಸ್ನೋ ವೈಟ್ ಅಂಡ್ ದಿ ಹಂಟ್ಸ್‌ಮ್ಯಾನ್', 'ಮಾರ್ಷಲ್ಸ್ ಲಾ', 'ಬ್ಲಡಿ ಕಟ್ಸ್', 'ದಿ ಫ್ರಾಂಕೆನ್‌ಸ್ಟೈನ್ ಕ್ರಾನಿಕಲ್ಸ್', 'ಬ್ಲಡ್ ಡ್ರೈವ್', 'ಲೆಸ್ ಮಿಸರೇಬಲ್ಸ್', 'ಗ್ರೀನ್ ಫಿಂಗರ್ಸ್', 'ಈಸ್ಟ್‌ಎಂಡರ್ಸ್', ' ಹ್ಯಾಪಿ ಅವರ್ಸ್', 'ಲವ್ ವಿದೌಟ್ ವಾಲ್' ಮತ್ತು 'ಬರ್ಡ್ಸ್ ಸಾರೋ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net