

ಅಕ್ಷಯ್ ಕುಮಾರ್ ನಟಿಸುತ್ತಿರುವ "ಬಚ್ಚನ್ ಪಾಂಡೆ' ಸಿನಿಮಾದಲ್ಲಿ ಎಷ್ಟು ಜನ ನಾಯಕಿಯರು ಇರಬಹುದು? ಹೀಗೊಂದು ಪ್ರಶ್ನೆ ಇದೀಗ ಹೊಸದಾಗಿ ಕಾಡುತ್ತಿದೆ. ಈಗಾಗಲೇ ಈ ಚಿತ್ರದಲ್ಲಿ ಅಕ್ಷಯ್ಗೆ ನಟಿ ಕೃತಿ ಸನೋನ್ ನಾಯಕಿ ಎಂಬುದು ಅಧಿಕೃತವಾಗಿದೆ. ಅಷ್ಟೇ ಅಲ್ಲ ಜಾಕ್ಲೀನ್ ರ್ನಾಂಡೀಸ್ ಸಹ ಈ ಸಿನಿಮಾದಲ್ಲಿದ್ದಾರೆ. ಹೀಗಿರುವಾಗಲೇ ಇದೇ ಚಿತ್ರಕ್ಕೆ ಮತ್ತೊಬ್ಬ ನಟಿಯೂ ಎಂಟ್ರಿಯಾಗಲಿದ್ದಾರಂತೆ.
ಯಾರವರು? ನಟಿ ಪೂಜಾ ಹೆಗ್ಡೆ! ಹೌದು, ಬಾಲಿವುಡ್ ಮತ್ತು ದಣದ ಸಿನಿಮಾರಂಗದಲ್ಲಿ ಮುಂಚೂಣಿಯಲ್ಲಿರುವ ಮತ್ತು ಸಾಲುಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಪೂಜಾ, ಇದೀಗ ಮತ್ತೆ ಅಕ್ಷಯ್ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಚಿತ್ರದಲ್ಲಿನ ಮುಖ್ಯವಾದ ಪಾತ್ರವೊಂದಕ್ಕೆ ಪೂಜಾ ಸರಿಯಾದ ಹೊಂದಾಣಿಕೆಯೆಂದು ನಿರ್ಧರಿಸಿರುವ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲ, ಪೂಜಾ ಅವರನ್ನೂ ಭೇಟಿ ಮಾಡಿ ಸಿನಿಮಾ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಅಂದಹಾಗೆ, "ಬಚ್ಚನ್ ಪಾಂಡೆ' ತಮಿಳಿನ "ಜಿಗರ್ಥಂಡ' ಚಿತ್ರದ ರಿಮೇಕ್. ಕಾಲಿವುಡ್ನಲ್ಲಿ ಮೂಲ ಚಿತ್ರವನ್ನು ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿದ್ದರು. ಇದೀಗ ರ್ಹಾದ್ ಸಾಮ್ಜಿ ಹಿಂದಿ ಚಿತ್ರಕ್ಕೆ ಆ್ಯಕ್ಷನ್&ಕಟ್ ಹೇಳುತ್ತಿದ್ದಾರೆ. ಇನ್ನುಳಿದಂತೆ ಪಂಕಜ್ ತ್ರಿಪಾಠಿ, ಅರ್ಷದ್ ವಾರ್ಸಿ ಸೇರಿ ಹಲವು ಈ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಅರ್ಧ ಭಾಗದ ಚಿತ್ರೀಕರಣವನ್ನೂ ಮುಗಿಸಿರುವ ತಂಡ, 2022ಕ್ಕೆ ತೆರೆಗೆ ಬರಲಿದೆ. ಏಜೆನ್ಸೀಸ್