ಇಂದು ಬೇಬಿ ಶಾಮಿಲಿ ಬರ್ತ್​ ಡೇ: ಕನ್ನಡಿಗರ ಮನ ಗೆದ್ದಿದ್ದ ಪುಟಾಣಿಗೆ ಈಗೆಷ್ಟು ವಯಸ್ಸು?

baby
Published on

ಬೆಂಗಳೂರು: ಬೇಬಿ ಶಾಮಿಲಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? 90ರ ದಶಕದಲ್ಲಿ ಬಾಲ ನಟಿ ಎಂದರೆ ಮೊದಲು ನೆನಪಾಗುತ್ತಿದ್ದದ್ದು ಬೇಬಿ ಶಾಮಿಲಿಯೇ. ಪುಟಾಣಿ ಹೆಜ್ಜೆ ಇಡುತ್ತಿದ್ದ ವಯಸ್ಸಿನಲ್ಲೇ ತನ್ನ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ತನ್ನದಾಗಿಸಿಕೊಂಡ ನಟಿ ಶಾಮಿಲಿ. ಆ ಶಾಮಿಲಿಗೆ ಇಂದು ಜನ್ಮದಿನದ ಸಂಭ್ರಮ.

ಬೇಬಿ ಶಾಮಿಲಿ ಎಂದೇ ಪ್ರಸಿದ್ಧವಾದ ಶಾಮಿಲಿಗೆ ಇಂದು ಜನ್ಮದಿನ. 1987ರಲ್ಲಿ ಜನಿಸಿದ ಆಕೆಗೆ ಇಂದಿಗೆ 34 ವರ್ಷಗಳು ತುಂಬಿವೆ. ನಟಿಯ ಜನ್ಮದಿನಕ್ಕೆ ಕನ್ನಡ ಸೇರಿ ಅನೇಕ ಭಾಷೆಗಳ ಸಿನಿಮಾ ನಟ, ನಟಿಯರು ಶುಭ ಹಾರೈಸಿದ್ದಾರೆ.

ಬೇಬಿ ಶಾಮಿಲಿ ತನ್ನ ಎರಡನೇ ವಯಸ್ಸಿನಿಂದಲೇ ನಟನೆಯಲ್ಲಿ ತೊಡಗಿಸಿಕೊಂಡವರು. 2 ವರ್ಷ ವಯಸ್ಸಾಗುದ್ದಾಗ ತಮಿಳಿನ ರಾಜನಾಡೈ ಹೆಸರಿನ ಚಿತ್ರದಲ್ಲಿ ಕಾಣಿಸಿಕೊಂಡರು. ಅದಾದ ನಂತರ ಮೂರನೇ ವರ್ಷದಲ್ಲಿ ಅಂಜಲಿ (ತಮಿಳು) ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನೂ ತಂದುಕೊಟ್ಟಿತ್ತು. ಅದೇ ವರ್ಷ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟ ಆಕೆ ಸಾಹಸಸಿಂಹ ವಿಷ್ಣುವರ್ಧನ್ ಜತೆ ಮತ್ತೆ ಹಾಡಿತು ಕೋಗಿಲೆ ಸಿನಿಮಾದಲ್ಲಿ ಪಲ್ಲವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ವಿಷ್ಣು ಜತೆ ನಟಿಸಿದ ನಂತರ ಆಕೆಗೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಕನ್ನಡ, ತಮಿಳು, ತೆಲುಗು ಮಲಯಾಳಂ ಅಷ್ಟೇ ಅಲ್ಲದೆ ಹಿಂದಿಯಲ್ಲೂ ಬಾಲಕಲಾವಿದೆಯಾಗಿ ಮಿಂಚಿದ್ದರು.

ಬಾಲಕಲಾವಿದೆಯಾಗಿ ತಮಿಳು ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅವರು ಸುಮಾರು 9 ವರ್ಷಗಳ ನಂತರ ತೆಲುಗಿನ ಓಯ್ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚಲು ಆರಂಭಿಸಿದರು. ಅದಾದ ನಂತರ ಅಮ್ಮಮ್ಮಗಾರಿಲ್ಲು, ವೀರ ಶಿವಾಜಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net