'ಫ್ಯಾಮಿಲಿ ಮ್ಯಾನ್​ನಿಂದಾಗಿ ಸಾವಿರಾರು ಸಂಬಂಧಗಳು ಬರ್ತಿವೆ' ವೆಬ್ ಸೀರಿಸ್​ನ ಅನುಭವ ಹಂಚಿಕೊಂಡ ಆಶ್ಲೇಷ

fm
Published on

ಮುಂಬೈ: ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡಿದ ವೆಬ್ ಸೀರಿಸ್ ಎಂದೇ ಹೇಳಬಹುದು. ಅದರಲ್ಲಿನ ಪ್ರತಿಯೊಂದು ಪಾತ್ರಗಳೂ ಜನರ ಮನಸ್ಸನ್ನು ಕದಿಯುವಲ್ಲಿ ಯಶಸ್ವಿಯಾಗಿದೆ. ಅದರಂತೆಯೇ ಹದಿಹರೆಯದ ತರುಣಿ ಧೃತಿ ಪಾತ್ರದಲ್ಲಿ ಕಾಣಿಸಿಕೊಂಡ ಆಶ್ಲೇಷಾ ಠಾಕೂರ್ ಎಲ್ಲರ ಮನಸ್ಸು ಗೆದ್ದಿರುವುದು ಅಕ್ಷರಶಃ ಸತ್ಯ.

17 ವರ್ಷದ ಆಶ್ಲೇಷಾ ಇಂತಹ ರೊಮ್ಯಾಂಟಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲಂತೆ. ಫ್ಯಾಮಿಲಿ ಮ್ಯಾನ್ 1 ಅಲ್ಲಿ ಚಿಕ್ಕ ಬಾಲಕಿಯಾಗಿ ಚೈಲ್ಡಿಷ್ ಆಗಿ ಕಾಣಿಸಿಕೊಂಡಿದ್ದ ಆಕೆಗೆ ಸೀಸನ್ 2 ಅಲ್ಲಿ ಈ ರೀತಿ ಪ್ರೀತಿ ಮಾಡುವ ಪಾತ್ರವಿದೆ ಎಂದು ನಿರ್ದೇಶಕರು ಆಕೆಯ ತಂದೆಗೆ ತಿಳಿಸಿದ್ದರಂತೆ. ಅದಕ್ಕೆ ಹೆದರದ ಆಕೆ ಒಪ್ಪಿ, ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಳಂತೆ. ಕಲ್ಯಾಣ ಪಾತ್ರದಲ್ಲಿ ನಟಿಸಿರುವ ಅಭಯ್ ವರ್ಮಾ ಆಕೆಗೆ ಮೊದಲೇ ಪರಿಚಯವಿದ್ದಿದ್ದರಿಂದ ಇಬ್ಬರೂ ಜೊತೆಗೂಡಿ ತಯಾರಿ ನಡೆಸಿದ್ದರಂತೆ.

ಸೀರಿಸ್​ನಲ್ಲಿ ಬರುವ ಕಿಡ್ನ್ಯಾಪ್ ಸೀನ್ ಆಶ್ಲೇಷಾಗೆ ಮಾನಸಿಕವಾಗಿ ಸಾಕಷ್ಟು ನೋವುಂಟು ಮಾಡಿತ್ತಂತೆ. ಈ ಸೀನ್ ಅನ್ನು ಬೇರೆ ರೀತಿಯಲ್ಲಿ ಬದಲಾಯಿಸಿ ಎಂದು ನಿರ್ದೇಶಕರಿಗೆ ಮನವಿ ಮಾಡಿದ್ದಳಂತೆ. ಆದರೆ ಅದಕ್ಕೆ ಅವರು ಒಪ್ಪದಿದ್ದಾಗ, ಧೈರ್ಯ ತೆಗೆದುಕೊಂಡು ನಟಿಸಿದೆ ಎನ್ನುತ್ತಾರೆ ನಟಿ. ಆ ರೀತಿಯ ಪಾತ್ರದಲ್ಲಿ ನಟಿಸಿದ್ದರಿಂದಾಗಿ ಇಂದು ನನ್ನನ್ನು ಜನರು ಒಬ್ಬ ನಟಿಯಾಗಿ ಗುರುತಿಸುತ್ತಿದ್ದಾರೆ. ಸೀಸನ್​ ಹಿಟ್ ಆದ ನಂತರ ಸಾಕಷ್ಟು ಜನರು ನನಗೆ ನೇರವಾಗಿ ಮದುವೆ ಪ್ರಪೋಸ್ ತಂದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಸಾಕಷ್ಟು ಮೆಸೇಜ್​ಗಳು ಪ್ರೀತಿ ನಿವೇದನೆಯೇ ಆಗಿದೆ ಎಂದು ಆಶ್ಲೇಷಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net