

ಮಂಗಳೂರು: ಎರಡು ವರ್ಷಗಳ ಹಿಂದೆ ಆರ್ಎಸ್ಬಿ ಕೊಂಕಣಿ ಭಾಷೆಯ ಮೊದಲ ಚಿತ್ರ ‘ಬಾಯೋ’ ಪ್ರಾರಂಭವಾಗಿತ್ತು. ಅದೀಗ ಅಂತಿಮ ಹಂತದಲ್ಲಿದ್ದು, ಸೆಪ್ಟೆಂಬರ್ನಲ್ಲಿ ತೆರೆಗೆ ಬರಲು ತಯಾರಿ ನಡೆಸಿದೆ. ಬಾಯೋ ಎಂದರೆ ಹೆಣ್ಣು. ಒಬ್ಬಳು ಹೆಣ್ಣುಮಗಳು ತನ್ನ ಸಂಸಾರದ ಏಳಿಗೆಗಾಗಿ ಹೇಗೆ ಜವಾಬ್ದಾರಿ ನಿಭಾಯಿಸುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇಳಾ ವಿಟ್ಲ ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿಘ್ನೇಶ್ ಹಾಗೂ ಆದ್ಯಾ ನಾಯಕ್ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ.
‘ಜೊತೆಜೊತೆಯಲಿ’ ಖ್ಯಾತಿಯ ಶಿವಾಜಿರಾವ್ ಜಾಧವ್, ‘ನಮ್ಮನೆ ಯುವರಾಣಿ’ ಖ್ಯಾತಿಯ ಸಹನಾ, ಸುಮತಿ ಕಾಮತ್, ವಿನಾಯಕ್, ಅಶ್ವಥ್, ಶಿರಾಲ್, ರೋಹಿತ್, ಕಲಾವತಿ, ಬೇಬಿ ಭವಾನಿ, ಬೇಬಿ ಅಕ್ಷಯ ಸೇರಿ 50ಕ್ಕೂ ಹೆಚ್ಚು ಕಲಾವಿದರಿದ್ದಾರೆ. ಚಿತ್ರವನ್ನು ನಾಗೇಂದ್ರ ಡಿ. ಕಾಮತ್ ನಿರ್ವಿುಸಿದ್ದಾರೆ. ರಮಾನಂದ ನಾಯಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.