ರಷ್ಯನ್ ಭಾಷೆಯ ‘ಬಾಹುಬಲಿ - 2’ ನೋಡಿದ್ದೀರಾ?

Baahubali 2 Final
Published on

ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ತಮಿಳು, ಹಿಂದಿ, ಮಲಯಾಳಂ, ಚೈನೀಸ್ ಭಾಷೆಗೆ ಡಬ್ ಆಗಿ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಆದರೆ, ಆ ಚಿತ್ರ ರಷ್ಯನ್ ಭಾಷೆಗೆ ಡಬ್ ಆಗಿರುವ ವಿಷಯ ಗೊತ್ತಾ?

ಗೊತ್ತಿಲ್ಲದಿದ್ದರೆ ಇಲ್ಲಿ ಕೇಳಿ. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಮುಂತಾದವರು ನಟಿಸಿರುವ ‘ಬಾಹುಬಲಿ 2’ ಚಿತ್ರವು ಅದ್ಯಾವಗಲೋ ಸದ್ದಿಲ್ಲದೆ ರಷ್ಯನ್ ಭಾಷೆಗೆ ಡಬ್ ಆಗಿದೆ. ಅಷ್ಟೇ ಅಲ್ಲ, ಅಲ್ಲಿನ ಟಿವಿ ಚಾನಲ್‌ಗಳಲ್ಲೂ ಪ್ರಸಾರವಾಗಿದೆ. ಈ ವಿಷಯವನ್ನು ಗೊತ್ತು ಮಾಡಿಸಿದ್ದು ಯಾರು ಗೊತ್ತಾ? ಭಾರತದಲ್ಲಿರುವ ರಷ್ಯನ್ ಎಂಬೆಸಿ.

ಗುರುವಾರ, ‘ಬಾಹುಬಲಿ 2’ ಚಿತ್ರವು ರಷ್ಯನ್ ಚಾನಲ್‌ವೊಂದರಲ್ಲಿ ಪ್ರಸಾರವಾಗಿದೆ. ಈ ಸಂದರ್ಭದಲ್ಲಿ, ಭಾರತದಲ್ಲಿರುವ ರಷ್ಯಾದ ರಾಯಭಾರ ಕಚೇರಿಯು ಒಂದು ಟ್ವೀಟ್ ಮಾಡಿದೆ. ‘ಭಾರತೀಯ ಸಿನಿಮಾಗಳಿಗೆ ರಷ್ಯಾದಲ್ಲೂ ಸಾಕಷ್ಟು ಜನಪ್ರಿಯತೆ ಇದೆ. ರಷ್ಯನ್ ಚಾನಲ್‌ನಲ್ಲಿ ಈಗ ಏನು ಪ್ರಸಾರವಾಗುತ್ತಿದೆ ನೋಡಿ. ‘ಬಾಹುಬಲಿ’ ವಿಥ್ ರಷ್ಯನ್ ವಾಯ್ಸ ಓವರ್’ ಎಂದು ಚಿತ್ರದ ಒಂದು ಕ್ಲಿಪ್ ಹಾಕಿದೆ. ಈ ಕ್ಲಿಪ್‌ನಲ್ಲಿ ‘ಬಾಹುಬಲಿ’ಯ ಬಾಯಲ್ಲಿ ರಷ್ಯನ್ ಭಾಷೆಯನ್ನು ಕೇಳಬಹುದು.

ರಾಯಭಾರ ಕಚೇರಿಯಿಂದ ಇಂಥದ್ದೊಂದು ಟ್ವೀಟ್ ಹೊರಬೀಳುತ್ತಿದ್ದಂತೆಯೇ, ‘ಬಾಹುಬಲಿ’ ಅಭಿಮಾನಿಗಳಿಗೆ ಆದ ಖುಷಿ ಅಷ್ಟಿಷ್ಟಲ್ಲ. ತಕ್ಷಣವೇ ಹಲವರು ಟ್ವೀಟ್ ಮಾಡಿ, ಧನ್ಯವಾದಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಕೆಲವರು ಚಿತ್ರದ ಬಗ್ಗೆ ತಮಗಿರುವ ಪ್ರಶ್ನೆಗಳನ್ನೂ ಕೇಳಿದ್ದಾರೆ. ಚಿತ್ರದ ಸಂಭಾಷಣೆಗಳನ್ನೇನೋ ಡಬ್ ಮಾಡಬಹುದು, ಹಾಡುಗಳ ಕಥೆ ಏನು ಎಂದು ಯಾರೋ ಒಬ್ಬರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಎಂಬ ಎಂಬೆಸಿ, ‘ಹಾಡುಗಳಿಗೆ ಸಬ್‌ಟೈಟಲ್‌ಗಳನ್ನು ಬಳಸಲಾಗುತ್ತದೆ’ ಎಂದು ಉತ್ತರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net