

ರಾಮ್ಗೋಪಾಲ್ ವರ್ಮಾ ಸದ್ಯ ‘ಕ್ಲೈಮ್ಯಾಕ್ಸ್’ ಹಂತಕ್ಕೆ ಬಂದಿದ್ದಾರೆ. ಇನ್ನೇನು ಅವರ ಹೊಸ ಸಿನಿಮಾ ಕ್ಲೈಮ್ಯಾಕ್ಸ್ ಬಿಡುಗಡೆ ಆಗಲಿದೆ. ಅರೇ.. ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಗೆ ಅನುಮತಿ ಸಿಕ್ತಾ? ಇಲ್ಲ.. ಬದಲಿಗೆ ಆನ್ಲೈನ್ ಮೂಲಕವೇ ಹಣ ನೀಡಿದರೆ, ಕುಳಿತಲ್ಲೇ ಸಿನಿಮಾ ತೋರಿಸುತ್ತಾರೆ ನಿರ್ದೇಶಕ ಆರ್ಜಿವಿ. ಹೌದು, ನೀಲಿ ತಾರೆ ಮಿಯಾ ಮಲ್ಕೋವಾ ಮುಖ್ಯಭೂಮಿಕೆ ನಿಭಾಯಿಸಿರುವ ‘ಕ್ಲೈಮ್ಯಾಕ್ಸ್’ ಚಿತ್ರ ಜೂನ್ 6ಕ್ಕೆ ಆ್ಯಪ್ ಮೂಲಕ ಬಿಡುಗಡೆ ಆಗಲಿದೆ. ಈ ಸಿನಿಮಾ ನೋಡಲು ಬಯಸುವವರು 100 ರೂಪಾಯಿ ನೀಡುವುದು ಕಡ್ಡಾಯ!
ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನ ರದ್ದಾಗಿದೆ. ಹೀಗಿರುವಾಗಲೇ ಈ ಹೊತ್ತಲ್ಲೇ ಆ್ಯಪ್ ಮೂಲಕ ಸಿನಿಮಾ ತೋರಿಸುವ ಹೊಸ ಕಾಯಕಕ್ಕೆ ಆರ್ಜಿವಿ ಮುಂದಾಗಿದ್ದಾರೆ. ಆನ್ಲೈನ್ ಕಂಟೆಂಟ್ಗೆ ಸಿನಿಮಾ ನಿರ್ಮಾಣ ಮಾಡುವ ಶ್ರೇಯಾ ಇಟಿ ಸಂಸ್ಥೆಯ ಜತೆ ಕೈ ಜೋಡಿಸಿರುವ ಆರ್ಜಿವಿ, ಮೊದಲ ಬಾರಿ ಆನ್ಲೈನ್ ಮೂಲಕ ಬರುತ್ತಿದ್ದಾರೆ. http://RGVWorld.in/ShreyasET ಆ್ಯಪ್ ಡೌನ್ಲೋಡ್ ಮಾಡಿಕೊಂಡು, 100 ರೂ ಕೊಟ್ಟು ಥ್ರಿಲ್ಲರ್ ಶೈಲಿಯ ‘ಕ್ಲೈಮ್ಯಾಕ್ಸ್’ ಸಿನಿಮಾ ವೀಕ್ಷಣೆ ಮಾಡಬಹುದು.
ಪೋಸ್ಟರ್ ಮೂಲಕವೇ ಸದ್ದು ಮಾಡುತ್ತಿರುವ ‘ಕ್ಲೈಮ್ಯಾಕ್ಸ್’ ಸಿನಿಮಾದಲ್ಲಿ ವಯಸ್ಕ ಸಿನಿಮಾಗಳ ತಾರೆ ಮಿಯಾ ಮಲ್ಕೋವಾ ಬೋಲ್ಡ್ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ರಿಲೀಸ್ ಆಗಿರುವ ಟೀಸರ್ ಕುತೂಹಲ ಮೂಡಿಸಿದೆ. ಇನ್ನು ಶನಿವಾರ ಸಂಜೆ 5ಗಂಟೆಗೆ ಕ್ಲೈಮ್ಯಾಕ್ಸ್ ಟ್ರೇಲರ್ ಬಿಡುಗಡೆ ಆಗಲಿದ್ದು, ಜೂನ್ 6ರ ರಾತ್ರಿ 9ಕ್ಕೆ ಆ್ಯಪ್ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. (ಏಜೆನ್ಸೀಸ್)