

ಮುಂಬೈ: ಕನ್ನಡದಲ್ಲಿ ಮಾಸ್ಟರ್ ಕಿಶನ್ ನಿರ್ದೇಶಿಸಿದ್ದ ‘ಕೇರ್ ಆಫ್ ಫುಟ್ಪಾತ್ 2’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅವಿಕಾ ಗೋರ್, ಸದ್ಯ ತೆಲುಗಿನಲ್ಲಿ ತುಂಬಾ ಬಿಜಿಯಾಗಿದ್ದಾರೆ. ಆರಂಭದಲ್ಲಿ ಸಾಂಪ್ರದಾಯಿಕ ಪಾತ್ರಗಳಲ್ಲಿ ನಟಿಸುತ್ತಿದ್ದ ಅವಿಕಾ, ಇದೀಗ ಬೋಲ್ಡ್ ಪಾತ್ರಗಳಿಗೂ ಸೈ ಅನ್ನುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಕಿಸ್ಸಿಂಗ್ ಮತ್ತು ಇಂಟಿಮೇಟ್ ದೃಶ್ಯಗಳ ಬಗ್ಗೆ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿದೆ.
ಅವಿಕಾ ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದನ್ನು ನೀಡಿದ್ದರು. ಆ ಸಂದರ್ಶನದಲ್ಲಿ ಸಿನಿಮಾಗಳಲ್ಲಿನ ಇಂಟಿಮೇಟ್ ದೃಶ್ಯಗಳ ಜತೆಗೆ ತನ್ನ ಗೆಳೆಯ ಮಿಲಿಂದ್ ಚಂದ್ವಾನಿ ಜೊತೆಗಿನ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ. ಕಳೆದ ವರ್ಷ ಅವಿಕಾ ಅವರು 1920 ಹೆಸರಿನ ಹಾರರ್ ಚಿತ್ರದಲ್ಲಿ ತುಂಬಾ ಹಾಟ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಆ ಚಿತ್ರದ ಬಗ್ಗೆ ಕೇಳಿದಾಗ ಕೆಲವು ಆಸಕ್ತಿದಾಯಕ ಉತ್ತರಗಳನ್ನು ನೀಡಿದರು.
ರೊಮ್ಯಾನ್ಸ್ ಮತ್ತು ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವುದು ತುಂಬಾ ಫನ್ ಎಂದು ಭಾವಿಸುತ್ತಾರೆ. ಆದರೆ, ಅವು ತುಂಬಾ ನೀರಸವಾಗಿರುತ್ತವೆ ಎಂದು ಅವಿಕಾ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ನಿರ್ದೇಶಕ ವಿಕ್ರಮ್ ಭಟ್ ಬಗ್ಗೆ ಮಾತನಾಡಿ, ಅವರು ನಾಚಿಕೆ ಸ್ವಭಾವದರು ಎಂದರು. ವಿಕ್ರಮ್ ಸರ್ ವೃತ್ತಿಪರರು. ಆದರೆ, ಸೆಟ್‌ಗಳಲ್ಲಿ ಯಾರಾದರೂ ಹೆಚ್ಚು ನಾಚಿಕೆಪಡುತ್ತಿದ್ದರೆ, ಅದು ವಿಕ್ರಮ್ ಸರ್ ಮಾತ್ರ. ಅನೇಕ ಬಾರಿ ಅಂತಹ ದೃಶ್ಯಗಳಿಂದ ಅವರು ಸ್ವಲ್ಪ ಮುಜುಗರ ಅನುಭವಿಸಿದ್ದಾರೆ. ನೀವು ಅಂತಹ ತಂಡದೊಂದಿಗೆ ಕೆಲಸ ಮಾಡುವಾಗ, ಇಂಟಿಮೇಟ್ ದೃಶ್ಯಗಳನ್ನು ಮಾಡುವುದು ಸುಲಭವಾಗುತ್ತದೆ ಎಂದು ಅವಿಕಾ ಹೇಳಿದರು.
ಸಿನಿಮಾ ವಿಚಾರಕ್ಕೆ ಬಂದರೆ, ಅವಿಕಾ ಅವರು ಬ್ಲಡಿ ಇಸ್ಕ್ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದಲ್ಲಿ ಕೇರ್ ಆಫ್ ಫುಟ್ಪಾತ್ ಸಿನಿಮಾ ಬಿಟ್ಟರೆ, ಪುನೀತ್ ರಾಜ್ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲಿ ತಾಜಾ ಸಮಾಚಾರ ಹಾಡಿನಲ್ಲಿ ಬಂದು ಹೋಗುತ್ತಾರೆ.
ಎಕ್ಕಡಿಕಿ ಪೋತಾವು ಚಿನ್ನವಾಡ ಹೆಸರಿನ ತೆಲುಗಿನ ಸೂಪರ್ ಹಿಟ್ ಸಿನಿಮಾ ಮೂಲಕ ಅವಿಕಾಗೆ ಒಳ್ಳೆಯ ಖ್ಯಾತಿ ಸಿಕ್ಕಿತು. (ಏಜೆನ್ಸೀಸ್)