

| ಚೇತನ್ ನಾಡಿಗೇರ್ ಬೆಂಗಳೂರು
ಲಘು ಕಾಮಿಡಿ ಚಿತ್ರಗಳಿಗೆ ಸಿಂಪಲ್ ಸುನಿ ಜನಪ್ರಿಯ. ಆದರೆ, ಈ ಬಾರಿ ನಗಿಸುತ್ತಲೇ ಗಂಭೀರವಾದ ಚಿತ್ರವೊಂದನ್ನು ಮಾಡಿದ್ದಾರೆ. ಕಾಮಿಡಿ ಜತೆಗೆ ಮಾಟಮಂತ್ರ, ವಾಮಾಚಾರವನ್ನು ಸೇರಿಸಿ ಹೆದರಿಸುತ್ತಾರೆ. ಒಂದು ಭಯಂಕರ ಲೋಕವನ್ನು ಅನಾವರಣಗೊಳಿಸಿದ್ದಾರೆ. ಚಿತ್ರ ಇಷ್ಟವಾಗುವುದು ಅವರು ನಿರೂಪಿಸಿರುವ ರೀತಿಗೆ. ಒಂದಿಷ್ಟು ್ಲಾಶ್ಬ್ಯಾಕ್, ಇನ್ನೊಂದಿಷ್ಟು ಹಾಸ್ಯ, ಮತ್ತೊಂದಿಷ್ಟು ರೋಚಕ ಅಂಶಗಳನ್ನು ಕಥೆಯನ್ನು ಮುನ್ನಡೆಸುತ್ತಾ ಹೋಗುತ್ತಾರೆ. ಬೋರ್ ಆಗುವುದಕ್ಕೆ ಸಮಯ ಕೊಡದಂತೆ, ಕಥೆಯನ್ನು ತೆರೆದಿಡುತ್ತಾರೆ. ಕೊನೆಯ ಅರ್ಧ ಗಂಟೆಯಲ್ಲಿ ಅವರು ಚಿತ್ರವನ್ನು ಇನ್ನೊಂದು ತುದಿಗೆ ಮುಟ್ಟಿಸುತ್ತಾರೆ. ಅದರಲ್ಲೂ ಶ್ರೀನಗರ ಕಿಟ್ಟಿಯ ಎಂಟ್ರಿಯಾದ ಮೇಲೆ ಚಿತ್ರಕ್ಕೆ ಇನ್ನೊಂದು ರೂಪ ಸಿಗುವುದಷ್ಟೇ ಅಲ್ಲ, ಹಲವು ಪ್ರಶ್ನೆಗಳೊಂದಿಗೆ ಅಂತ್ಯವಾಗುತ್ತದೆ.
ಶರಣ್ಗೆ ಹೇಳಿ ಮಾಡಿಸಿದ ಕಥೆ ಇದು. ಅವರ ಲವಲವಿಕೆಯ ಅಭಿನಯ, ಮ್ಯಾನರಿಸಂ ಎಲ್ಲವೂ ಚಿತ್ರದ ಓಟಕ್ಕೆ ಪೂರಕವಾಗಿದೆ. ಕೆಲವು ದೃಶ್ಯಗಳಲ್ಲಿ ಅವರ ಚಯೆರ್ಗಳು ವಿಚಿತ್ರವೆನಿಸಿದರೂ, ಅಂತ್ಯದಲ್ಲಿ ಅದಕ್ಕೊಂದು ಉತ್ತರ ಸಿಗುತ್ತದೆ. ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಸಾಯಿಕುಮಾರ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ಸಾಧು ಕೋಕಿಲ, ಸುಧಾರಾಣಿ, ಭವ್ಯ, ಬಿ. ಸುರೇಶ, ಅಯ್ಯಪ್ಪ ಶರ್ಮ ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ ಎಲ್ಲವೂ ಚಿತ್ರದ ಮೆರಗನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮೊದಲ ಭಾಗದ ಬಗ್ಗೆ ತಪು$್ಪಗಳನ್ನು ಕಂಡುಹಿಡಿಯುವುದು ಕಷ್ಟ. ಇನ್ನು, ಸುನಿ ಎರಡನೆಯ ಭಾಗವನ್ನು ಹೇಗೆ ಶುರು ಮಾಡುತ್ತಾರೆ ಮತ್ತು ಇನ್ನೂ ಯಾವ್ಯಾವ ಹೊಸ ಅವತಾರಗಳನ್ನು ತೆರೆದಿಡುತ್ತಾ ಹೋಗುತ್ತಾರೋ? ಉತ್ತರಕ್ಕೆ "ಅವತಾರ ಪುರುಷ 2' ನೋಡಿ. ಅದಕ್ಕೂ ಮುನ್ನ ಮೊದಲ ಭಾಗ ನೋಡಿ.