ಲಾಕ್​ಡೌನ್ ಸಮಯದಲ್ಲಿ ಕೃಷಿಯತ್ತ ಒಲವು ತೋರಿದ ತಾರೆಯರು...

smantha
Published on

ಬೆಂಗಳೂರು: ಲಾಕ್​ಡೌನ್ ಸಮಯದಲ್ಲಿ ಸಿನಿಮಾ ಕಲಾವಿದರೆಲ್ಲಾ ಓದು, ಸಿನಿಮಾ ವೀಕ್ಷಣೆ ಮತ್ತು ಮನೆ ಕೆಲಸ ಮಾಡುವುದರಲ್ಲಿ ತೊಡಗಿಸಿಕೊಂಡರೆ, ಉಪೇಂದ್ರ ಮಾತ್ರ ಸೀದಾ ತಮ್ಮ ತೋಟಕ್ಕೆ ಹೋಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಮೂರು ತಿಂಗಳ ನಂತರ ಹೂವು ಮತ್ತು ತರಕಾರಿ ಬೆಳೆದಿರುವ ಉಪೇಂದ್ರ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಬೇರೆಲ್ಲಾ ಕ್ಷೇತ್ರಗಳಿಗೆ ಲಾಕ್​ಡೌನ್ ಅನ್ವಯವಾದರೂ, ಕೃಷಿ ಕ್ಷೇತ್ರಕ್ಕೆ ಅನ್ವಯವಾಗಿರಲಿಲ್ಲ. ಇದನ್ನು ಸದುಪಯೋಗ ಪಡಿಸಿಕೊಂಡ ಉಪೇಂದ್ರ ಅವರು ತಮ್ಮ ತೋಟಕ್ಕೆ ಹೋಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಕ್ರಿಮಿನಾಶಕ, ರಸಗೊಬ್ಬರ ಯಾವುದನ್ನೂ ಬಳಸದೆ ಸೌತೆಕಾಯಿ, ಬದನೆಕಾಯಿ, ಚೆಂಡು ಹೂ ಬೆಳೆದಿದ್ದಾರೆ. ಇದನ್ನು ನೈಸರ್ಗಿಕ ಕೃಷಿ ಎನ್ನುವ ಅವರು, ಕಡಿಮೆ ವೆಚ್ಚದಲ್ಲಿ ಬೆಳೆಯಬಹುದು ಎಂದು ಬೆಳೆದು ತೋರಿಸಿದ್ದಾರೆ.

ಸಮಂತಾ ಟೆರೇಸ್ ಗಾರ್ಡನಿಂಗ್: ಇನ್ನೊಂದು ಕಡೆ ಸಮಂತಾ ಸಹ ಲಾಕ್​ಡೌನ್​ನಲ್ಲಿ ತಮ್ಮ ಮನೆಯ ಟೆರೇಸ್ ಮೇಲೆ ಎಲೆಕೋಸು ಬೆಳೆದು ಅಭಿಮಾನಿಗಳಿಂದ ಜೈ ಎನಿಸಿಕೊಂಡಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ಸಮಂತಾ ಅವರ ಸುದ್ದಿಯೇ ಇರಲಿಲ್ಲ. ಸೋಷಿಯಲ್ ಮೀಡಿಯಾದಿಂದ ಅವರು ನಾಪತ್ತೆಯಾಗಿದ್ದನ್ನು ನೋಡಿ, ಅವರು ಗರ್ಭಿಣಿ ಇರಬಹುದು ಎಂದು ದೊಡ್ಡ ಸುದ್ದಿಯಾಗಿತ್ತು. ಆದರೆ, ಸಮಂತಾ ಮಾತ್ರ ಸದ್ದಿಲ್ಲದೆ ಟೆರೇಸ್ ಮೇಲೆ ಗಾರ್ಡನಿಂಗ್​ನಲ್ಲಿ ತೊಡಗಿಸಿಕೊಂಡಿದ್ದರು. ಅದರ ಫಲವಾಗಿ ಈಗ ಅವರು ಲೆಟ್ಯೂಸ್ ಬೆಳೆದಿದ್ದಾರೆ. ಅಷ್ಟೇ ಅಲ್ಲ, ಮೆನಯಲ್ಲೇ ಏನೆಲ್ಲಾ ಮಾಡಬಹುದು ಎಂದು ವಿಡಿಯೋಗಳ ಮೂಲಕ ತಮ್ಮ ಅಭಿಮಾನಿಗಳಿಗೂ ಹಲವು ವಿಷಯಗಳನ್ನು ಹೇಳಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net