ತಮ್ಮ ಮುದ್ದಾದ ಹೆಣ್ಣು ಮಗುವಿಗೆ ಮಿಯು ಎಂದು ಹೆಸರಿಟ್ಟ ನಿರ್ದೇಶಕ ಅಟ್ಲೀ ಕುಮಾರ್​! ಏನಿದರ ಅರ್ಥ? Miyou

ತಮ್ಮ ಮುದ್ದಾದ ಹೆಣ್ಣು ಮಗುವಿಗೆ ಮಿಯು ಎಂದು ಹೆಸರಿಟ್ಟ ನಿರ್ದೇಶಕ ಅಟ್ಲೀ ಕುಮಾರ್​! ಏನಿದರ ಅರ್ಥ? Miyou
ತಮ್ಮ ಮುದ್ದಾದ ಹೆಣ್ಣು ಮಗುವಿಗೆ ಮಿಯು ಎಂದು ಹೆಸರಿಟ್ಟ ನಿರ್ದೇಶಕ ಅಟ್ಲೀ ಕುಮಾರ್​! ಏನಿದರ ಅರ್ಥ? Miyou
Published on

ಪ್ರಮುಖ ಮುಖ್ಯಾಂಶಗಳು

  • ಸ್ಟಾರ್ ನಿರ್ದೇಶಕ ಅಟ್ಲೀ ಹಾಗೂ ಪ್ರಿಯಾ ದಂಪತಿ ತಮ್ಮ ಎರಡನೇ ಹೆಣ್ಣು ಮಗಳಿಗೆ "ಮಿಯು" ಎಂದು ಹೆಸರಿಟ್ಟಿದ್ದಾರೆ
  • ಜಪಾನೀಸ್ ಮೂಲದ 'ಮಿಯು' ಎಂಬ ಹೆಸರಿಗೆ ಸೌಂದರ್ಯ, ಮೃದುತ್ವ ಮತ್ತು ಪ್ರೀತಿ ಎಂಬ ಅರ್ಥವಿದೆ
  • 2014ರಲ್ಲಿ ಮದುವೆಯಾಗಿದ್ದ ಅಟ್ಲೀ-ಪ್ರಿಯಾ ದಂಪತಿ ಜೀವನಕ್ಕೆ ಏಪ್ರಿಲ್ 20ರಂದು ಎರಡನೇ ಮಗುವಾಗಿ ಹೆಣ್ಣು ಮಗು ಬಂದಿದೆ
  • ಮಗುವಿನ ಭಾವುಕ ಪೋಸ್ಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ
Miyou : ದಕ್ಷಿಣ ಚಿತ್ರರಂಗದ ಖ್ಯಾತ ಸೆಲೆಬ್ರಿಟಿ ದಂಪತಿಯಾದ ನಿರ್ದೇಶಕ ಅಟ್ಲೀ ಕುಮಾರ್ ಹಾಗೂ ಅವರ ಪತ್ನಿ ಪ್ರಿಯಾ ಇತ್ತೀಚೆಗಷ್ಟೇ ಎರಡನೇ ಬಾರಿಗೆ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂತೋಷದ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸದ್ಯ ತಮ್ಮ ಮುದ್ದಾದ ಹೆಣ್ಣು ಮಗಳಿಗೆ "ಮಿಯು" (Miyou) ಎಂದು ನಾಮಕರಣ ಮಾಡಿರುವುದಾಗಿ ಈ ದಂಪತಿ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. 
ನಿರ್ದೇಶಕ ಅಟ್ಲೀ ಹಾಗೂ ಪ್ರಿಯಾ ದಂಪತಿ ತಮ್ಮ ಮಗುವಿನ ಅತ್ಯಂತ ಸುಂದರವಾದ ಫೋಟೋ ಒಂದನ್ನು ಹಂಚಿಕೊಂಡಿದ್ದು, ಅದಕ್ಕೆ "ನಮ್ಮ ಹೃದಯದಲ್ಲಿ ಅತಿ ದೊಡ್ಡ ಜಾಗವನ್ನು ಗಿಟ್ಟಿಸಿಕೊಂಡ ಪುಟ್ಟ ಕಂದಮ್ಮ" ಎಂದು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
ತಮ್ಮ ಪ್ರೀತಿಯ ಸಂಕೇತವಾದ ಮಗಳಿಗೆ ನಾಮಕರಣ ಮಾಡಿರುವುದಾಗಿ ತಿಳಿಸಿರುವ ಅವರು, 'ಮಿಯು' (Miyu) ಎಂಬ ಈ ಜಪಾನೀಸ್ ಹೆಸರಿನ ವಿಶೇಷ ಅರ್ಥವನ್ನು ಸಹ ಬಿಚ್ಚಿಟ್ಟಿದ್ದಾರೆ. ಮಿಯು ಎಂದರೆ ಸೌಂದರ್ಯ, ಮೃದುತ್ವ ಮತ್ತು ಪ್ರೀತಿಯನ್ನು ಸಂಕೇತಿಸುತ್ತದೆ ಎಂದು ವಿವರಿಸಿದ್ದಾರೆ. 
ಸದ್ಯ ಅಟ್ಲೀ ಕುಮಾರ್​ ಹಂಚಿಕೊಂಡಿರುವ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಹಾಗೂ ಸಿನಿಮಾ ರಂಗದ ಗಣ್ಯರು ಪ್ರೀತಿಯ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಅಂದಹಾಗೆ, ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಅಟ್ಲೀ ಕುಮಾರ್, 'ಥೇರಿ', 'ಮೆರ್ಸಲ್', ರಾಜಾ ರಾಣಿ ಹಾಗೂ ಬಿಗಿಲ್​ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದು, ಬಾಲಿವುಡ್‌ನಲ್ಲೂ ಶಾರುಖ್ ಖಾನ್ ಅಭಿನಯದ 'ಜವಾನ್' ಹಾಗೂ 'ಬೇಬಿ ಜಾನ್' ಚಿತ್ರಗಳ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. 
2014ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಟ್ಲೀ ಮತ್ತು ಪ್ರಿಯಾ ದಂಪತಿಗೆ 2023ರಲ್ಲಿ ಮೊದಲ ಮಗು ಜನಿಸಿತು. ಇದೀಗ ಕಳೆದ ಏಪ್ರಿಲ್ 20ರಂದು ಈ ದಂಪತಿಯ ಜೀವನಕ್ಕೆ ಎರಡನೇ ಮಗುವಾಗಿ ಪುಟ್ಟ ಲಕ್ಷ್ಮಿಯ (ಹೆಣ್ಣು ಮಗು) ಆಗಮನವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net