'ವಿಜಯ್​ನ ಮದುವೆಯಾಗಿ ಸಂತೋಷವಾಗಿದ್ದೇನೆ'; ಮೊದಲ ಪ್ರೀತಿ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿಕೆಗೆ Cocktail-2 ಸಿನಿಮಾ ತಂಡ ದಂಗು!

Rashmika Mandanna On First Love
Rashmika Mandanna On First Love
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಪ್ರೀತಿ ಬಗ್ಗೆ ಕೇಳಿದ್ದಕ್ಕೆ ವಿಜಯ್​ ಜೊತೆ ಸಂತೋಷವಾಗಿದ್ದೇನೆ ಎಂದ ರಶ್ಮಿಕಾ ಮಂದಣ್ಣ
  • ಕಾಕ್ಟೇಲ್​ ಸಿನಿಮಾ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಹೇಳಿಕೆಗೆ ಹಲವರು ದಂಗು
  • ರಕ್ಷಿತ್​ ಶೆಟ್ಟಿ ಬಗ್ಗೆ ಯಾವ ವಿಚಾರವೂ ಮಾತನಾಡದ ರಶ್ಮಿಕಾ ಮಂದಣ್ಣ
Rashmika Mandanna On First Love:
ಕಿರಿಕ್​ ಪಾರ್ಟಿ ಸಿನಿಮಾ ಮೂಲಕ ಕನ್ನಡ ಸಿನಿಮಾಕ್ಕೆ ಬಂದ ನಟಿ ರಶ್ಮಿಕಾ ಮಂದಣ್ಣ, ಅವರ ಡಿಫರೆಂಟ್​ ಲುಕ್​​ನಿಂದಲೇ ಎಲ್ಲರಿಗೂ ಇಷ್ಟವಾಗಿದ್ದರು. ಈ ಸಿನಿಮಾದಿಂದ ಗೀತಗೋವಿಂದಂನಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಈ ಮಧ್ಯೆ ರಕ್ಷಿತ್​ ಶೆಟ್ಟಿ ಜೊತೆಗೆ ಎಂಗೇಜ್ಮೆಂಟ್​ ಕೂಡ ನಡೆದಿತ್ತು..ಆ ಬೆನ್ನಲ್ಲೇ ಕೇಳಿ ಬಂದಿದ್ದ ಅಘಾತ ಸುದ್ದಿ ಎಂದರೆ, ಇಬ್ಬರ ಬ್ರೇಕಪ್​ ವಿಚಾರ. ಫ್ಯಾನ್ಸ್, ಕಾಂಟೆಂಟ್​ ಕ್ರಿಯೇಟರ್ಸ್​ ತಮ್ಮದೇ ಆದ ಕತೆಗಳನ್ನು ಕಟ್ಟಿದ್ದರು. ಇದು ಇಡೀ ಭಾರತಕ್ಕೆ ಗೊತ್ತಿರುವ ವಿಚಾರ. ಆದರೆ, ಈ ಮಧ್ಯೆ ಕಾಕ್ಟೇಲ್-2​ ಸಿನಿಮಾ ಸಮಾರಂಭವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರು ತಮ್ಮ ಮೊದಲ ಪ್ರೀತಿ ಬಗ್ಗೆ ಕೊಟ್ಟಿರುವ ಹೇಳಿಕೆಯು ಅಚ್ಚರಿ ಮೂಡಿಸಿದೆ.
ಜೂನ್​19ರಂದು ಕಾಕ್ಟೇಲ್​2 ಸಿನಿಮಾ ರಿಲೀಸ್ ಆಗಲಿದೆ.ಈ ಸಿನಿಮಾದ ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ  ತಮ್ಮ ಮೊದಲ  ಪ್ರೀತಿ ಬಗ್ಗೆ  ರಶ್ಮಿಕಾ ಮಂದಣ್ಣ, ಕೃತಿ ಸನೂನು  ಹಾಗೂ ಶಾಹಿದ್​ ಕಪೂರ್​  ಮಾತನಾಡಿರುವುದು ಸದ್ಯ ವೈರಲ್​ ಆಗ್ತಿದೆ. ಅದರಲ್ಲು ರಶ್ಮಿಕಾ ಮಂದಣ್ಣ ಅವರು ತಮ್ಮ ಮೊದಲ ಮಾಜಿ ಪ್ರೇಮಿಯಾದ ರಕ್ಷಿತ್​ ಶೆಟ್ಟಿ ಬಗ್ಗೆ ಮಾತನಾಡದೇ ನೇರವಾಗಿ ವಿಜಯ್​​ ದೇವರಕೊಂಡ ಜೊತೆಗೆ ಮದುವೆ ಮಾಡಿಕೊಂಡು ಸಂತೋಷವಾಗಿದ್ದೇನೆ ಎಂದಿರುವುದು ಇನ್ನಷ್ಟು ಚರ್ಚೆಗೆ  ಕಾರಣವಾಗಿದೆ.  

ರಶ್ಮಿಕಾ, ಕೃತಿ ಸನೂನ್​ ಚರ್ಚೆ ಹೀಗಿತ್ತು

ಕಾಕ್ಟೇಲ್​ ಸಿನಿಮಾ ಸ್ನೇಹ, ಪ್ರೀತಿ ಹಾಗೂ ಭಾವನಾತ್ಮಕತೆಯನ್ನು ಹೊಂದಿರುವ ಸಿನಿಮಾವಾದ ಕಾರಣ, ಸಿನಿಮಾದ ಪ್ರಮುಖ ಪಾತ್ರಧಾರಿಗಳಿಗೆ ಮೊದಲ ಪ್ರೀತಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದು ಹೀಗೆ..
'ನಾನೀಗ ವಿಜಯ್​ ದೇವರಕೊಂಡ ಜೊತೆಗೆ ಸಂತೋಷವಾಗಿ ಮದುವೆಯಾಗಿದ್ದೇನೆ. ಹಾಗಾಗಿ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವ ತೀರ್ಮಾನ ಎಂದು ಕೈಗೊಳ್ಳೋದಿಲ್ಲ ಎಂದು ಹೇಳಿದ್ದಾರೆ. ಆಗ ಕೃತಿ ಸನೂನ್​ ಅವರು ಮತ್ತೆ ಮೊದಲ ಪ್ರೀತಿ ನೆನಪಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ರಶ್ಮಿಕಾ ಮಂದಣ್ಣ ಅವರು ಜಾಣ್ಮೆಯಿಂದ ಉತ್ತರಿಸಿದ್ದಾರೆ.  'ಯಾಕೆ? ನಾನೀಗ ವಿಜಯ್​ನ ಮದುವೆಯಾಗಿ ಅಪಾರ ಸಂತೋಷದಲ್ಲಿದ್ದೇನೆ' ಎಂದು ಹೇಳಿದ್ದಾರೆ.
ಆಗ ಶಾಹಿದ್​ ಕಪೂರ್ ಅವರು 'ಕೆಲವೊಮ್ಮೆ ಮೊದಲ ಪ್ರೀತಿ ಯಾರಿಗೂ ನೆನಪಿರೋದಿಲ್ಲ.  ಪ್ರೀತಿ ಎಂದರೆ ನಾವು ಯಾರ ಜೊತೆಗೆ ಜೀವನ ಕಳೆಯುತ್ತೇವೆ. ಅವರು ಹೇಗಿರುತ್ತಾರೆಯೋ ಹಾಗೆ ಸ್ವೀಕರಿಸುತ್ತೇವೆ' ಎನ್ನುವದರ ಮೇಲೆ ನಿರ್ಧಾರವಾಗುತ್ತದೆ ಎಂದಿದ್ದಾರೆ. 

ವಿಜಯ್​ ಜೊತೆ ಮದುವೆ, ಲವ್​

ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು 2018ರಲ್ಲಿ ರಿಲೀಸ್​ ಆಗಿದ್ದ ಗೀತಗೋವಿಂದಂ ಸಿನಿಮಾ ಮೂಲಕ ಪರಿಚಯವಾದರು. ಸಿನಿಮಾ ರಿಲೀಸ್​ ನಂತರ ರಕ್ಷಿತ್​ ಶೆಟ್ಟಿಯೊಂದಿಗೆ ಬ್ರೇಕಪ್​ ಮಾಡಿಕೊಂಡಿದ್ದರು. 2019ರಲ್ಲಿ ಡಿಯರ್​ ಕಾಮ್ರೇಡ್​ ಸಿನಿಮಾ ರಿಲೀಸ್​​ನಂತರ ಒಟ್ಟಾಗಿ ಕೆಲಸ ಮಾಡಿದ್ದು ಕಡಿಮೆಯೇ.
ಇಬ್ಬರು ಎಂಟು ವರ್ಷಗಳ ಕಾಲ ಡೇಟಿಂಗ್​ನಲ್ಲಿದ್ದರು ಎನ್ನಲಾಗಿದೆ.  ಇಬ್ಬರು ಒಂದೇ ಪ್ಲೇಸ್​ನಲ್ಲಿರುವ ಫೋಟೋಗಳನ್ನು ಪ್ರತ್ಯೇಕವಾಗಿ ಪೋಸ್ಟ್​​ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಆಗಾಗ್ಗೆ  ಸುದ್ದಿ ಹಂಚಿಕೊಳ್ಳುತ್ತಿದ್ದರು. ಕೊನೆಗೂ ಎಲ್ಲರ ಊಹೆಯು ಸರಿ ಎನ್ನುವಂತೆ ಫೆಬ್ರವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net