ಜೂನಿಯರ್​ ಸಮಂತಾ ಆಶು ರೆಡ್ಡಿ ಹಾಟ್​ ಅವತಾರ ವೈರಲ್​! ಇದು ಅತಿಯಾಯ್ತು ಅಂದ್ರು ಫ್ಯಾನ್ಸ್​

Ashu Reddy
Published on

ಹೈದರಾಬಾದ್​: ಚಲ್​ ಮೋಹನ್​ ರಂಗ ಚಿತ್ರದ ಮೂಲಕ ಟಾಲಿವುಡ್​ನಲ್ಲಿ ಸಿನಿ ಜರ್ನಿ ಆರಂಭಿಸಿದ ನಟಿ ಆಶು ರೆಡ್ಡಿ (Ashu reddy), ಬಿಗ್​ಬಾಸ್​ ಸಿಸನ್​ 3ರಲ್ಲಿ ಭಾಗವಹಿಸುವ ಮೂಲಕ ತುಂಬಾ ಖ್ಯಾತಿಯನ್ನು ಪಡೆದಿದ್ದಾರೆ. ನೋಡಲು ಸ್ವಲ್ಪ ಸಮಂತಾರನ್ನೇ ಹೋಲುವ ಆಶು ರೆಡ್ಡಿಯನ್ನು ಟಾಲಿವುಡ್ (Tollywood)​ನಲ್ಲಿ ಜೂನಿಯರ್​ ಸಮಂತಾ ಅಂತಾನೇ ಕರೆಯುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಆಶು ರೆಡ್ಡಿ, ಆಗಾಗ ತಮ್ಮ ಬೋಲ್ಡ್​ ಫೋಟೋ ಹಾಗೂ ವಿಡಿಯೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಅಲ್ಲದೆ, ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಬೋಲ್ಡ್​ ಕಂಟೆಂಟ್​​ ಮತ್ತು ವಿಡಿಯೋಗಳನ್ನು ಶೇರ್​ ಮಾಡುವ ಮೂಲಕ ಟ್ರೋಲ್​ಗು ಗುರಿಯಾಗುತ್ತಿರುತ್ತಾರೆ. ಈ ಬಾರಿ ಸಿಕ್ಕಾಪಟ್ಟೆ ಹಾಟ್​ ವಿಡಿಯೋವನ್ನು ಆಶು ರೆಡ್ಡಿ ಹರಿಬಿಟ್ಟಿದ್ದಾರೆ. ಕಪ್ಪು ಬಣ್ಣದ ಥೈ-ಹೈ ಸ್ಲಿಟ್ ಸ್ಕರ್ಟ್‌ನಲ್ಲಿ ಆಶು ರೆಡ್ಡಿ ಮಾದಕ ನೋಟ ಬೀರಿದ್ದಾರೆ. ಎರಡು ದಿನದ ಹಿಂದೆ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದು, 86 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಅಲ್ಲದೆ, ಆಶು ರೆಡ್ಡಿ ಹಾಟ್​ ಅವತಾರಕ್ಕೆ ಫಿದಾ ಆಗಿ ತರಹೇವಾರಿ ಕಾಮೆಂಟ್​ ಮಾಡುತ್ತಿದ್ದಾರೆ. ಕೆಲವರು ತುಂಬಾ ಅತಿಯಾಯ್ತು ಎಂದು ಆಶು ರೆಡ್ಡಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಆಶು ರೆಡ್ಡಿ ಈಗ ಕೈತುಂಬ ಪ್ರಾಜೆಕ್ಟ್​ಗಳಲ್ಲಿ ಬಿಜಿ ಆಗಿದ್ದಾರೆ. ಪದ್ಮವ್ಯೂಹಂ ಲೋ ಚಕ್ರಧಾರಿ ಚಿತ್ರದಲ್ಲಿ ಪದ್ಮಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಯುವಕರು ಹೇಗೆ ದಾರಿ ತಪ್ಪುತ್ತಾರೆ? ಎಂತಹ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬುದನ್ನು ವಿವರಿಸುವ ಪಾತ್ರದಲ್ಲಿ ಆಶು ರೆಡ್ಡಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಏವಂ ಹೆಸರಿನ ಸಿನಿಮಾದಲ್ಲೂ ಆಶು ರೆಡ್ಡಿ ಹರಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಆಶು ರೆಡ್ಡಿ ಸ್ವಲ್ಪ ಬೋಲ್ಡ್ ಆಗಿ ಕಾಣಿಸಲಿದ್ದಾರೆ ಎನ್ನಲಾಗಿದೆ.

ಆಶು ರೆಡ್ಡಿ ಡಬ್​ಸ್ಮ್ಯಾಶರ್​ ಕೂಡ ಹೌದು. ಚಲ್​ ಮೋಹನ್​ ರಂಗ ಚಿತ್ರದ ಮೂಲಕ ಟಾಲಿವುಡ್​ ಚಿತ್ರರಂಗದಲ್ಲಿ ತಮ್ಮ ಸಿನಿ ಜರ್ನಿ ಆರಂಭಿಸಿದರು. ಬಿಗ್​ಬಾಸ್​ ಸಿಸನ್​ 3ರಲ್ಲಿ ತುಂಬಾ ಗುರುತಿಸಿಕೊಂಡವರು. ಹ್ಯಾಪಿ ಡೇಸ್ ಎಂಬ ಕಾರ್ಯಕ್ರಮದ ಮೂಲಕ ಟಿವಿ ನಿರೂಪಕರಾಗಿಯು ಕಾಣಿಸಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಶು ರೆಡ್ಡಿ ಇನ್​ಸ್ಟಾಗ್ರಾಂಲ್ಲಿ 1 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ನೋಡಲು ಟಾಲಿವುಡ್ ನಟಿ ಸಮಂತಾ ಹೋಲಿಕೆಯು ಆಕೆಗೆ ಸ್ವಲ್ಪ ಖ್ಯಾತಿಯನ್ನು ತಂದುಕೊಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net