

ಕ್ರಿಯಾಶೀಲತೆಯ ಮೂಲಕವೇ ನಾಡಿನ ಮನಸೆಳೆದ ಕಲಾಕಾರ ಬಾದಲ್ ನಂಜುಂಡಸ್ವಾಮಿ, ಕರೊನಾ ಹಿನ್ನೆಲೆಯಲ್ಲೂ ಸಾಕಷ್ಟು ಕಲಾತ್ಮಕ ಚಿತ್ರಗಳನ್ನು ಬಿಡಿಸಿ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಇದೀಗ ಬೆಂಗಳೂರಿನ ಬೀದಿಗೆ ಮಾಸ್ಕ್ ಹಾಕಿಸಿದ್ದಾರೆ! ಹಾಗಂತ ಬಟ್ಟೆ ತಂದು ಬೀದಿಗೆ ಹೊದಿಸಿಲ್ಲ. ಬದಲಿಗೆ ಬೀದಿ ಬದಿಯ ಗೋಡೆಗಳಿಗೆ ಮಾಸ್ಕ್ ರೂಪದಲ್ಲಿ ಪೇಂಟಿಂಗ್ ಮಾಡಿದ್ದಾರೆ. ಮತ್ತೊಂದೆಡೆ ರಸ್ತೆಗಳ ಮೇಲೆ ಕರೊನಾ ವೈರಸ್ಗಳ ಹಾವಳಿ ಹೇಗಿದೆ ಎಂಬುದನ್ನು 3ಡಿ ಪೇಟಿಂಗ್ ಮೂಲಕ ಚಿತ್ರಿಸಿದ್ದಾರೆ. ಪೊಲೀಸ್ ಠಾಣೆಯ ಮೆಟ್ಟಿಲಿಗೂ ಮಾಸ್ಕ್ ಹಾಕಿಸಿದ್ದಾರೆ. ಒಟ್ಟಿನಲ್ಲಿ ಲಾಕ್ಡೌನ್ ಹೊತ್ತಲ್ಲಿ ಘಟಿಸಿದ ಸಣ್ಣ ಸಣ್ಣ ಬದಲಾವಣೆಗಳನ್ನೂ ಚಿತ್ರಕಲೆಯ ಮೂಲಕ ಹೊರಹಾಕಿದ್ದಾರೆ ಬಾದಲ್. ಅಂಥ ಕೆಲ ಫೋಟೋಗಳು ಇಲ್ಲಿವೆ ನೋಡಿ..