

ಮುಂಬೈ: ಟಿವಿ ಶೋಗಳಲ್ಲಿ ಅತ್ಯಂತ ವಿವಾದಾತ್ಮಕ ಶೋ ಎಂದು ಕರೆಸಿಕೊಂಡಿರುವ ಬಿಗ್ಬಾಸ್ ರಿಯಾಲಿಟಿ ಶೋ ಎಲ್ಲ ಭಾಷೆಗಳಲ್ಲೂ ತನ್ನದೇಯಾದ ವೀಕ್ಷಕರ ಬಳಗವನ್ನೇ ಸೃಷ್ಟಿಸಿಕೊಂಡಿದೆ. ವಿವಾದದ ಹೊರತಾಗಿಯೂ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಈಗಲೂ ಅದೇ ಜೋಶ್ನಲ್ಲಿ ಮುಂದುವರಿಯುತ್ತಿದೆ. ದಕ್ಷಿಣ ಭಾರತಕ್ಕೆ ಹೋಲಿಸಿದರೆ ಹಿಂದಿಯ ಬಿಗ್ಬಾಸ್ ಶೋಗೆ ಹೆಚ್ಚು ವೀಕ್ಷಕರಿದ್ದಾರೆ. ಈ ಶೋ ಎಷ್ಟು ಜನಪ್ರಿಯವಾಗಿದೆ ಎಂದರೆ ಈಗಾಗಲೇ 17 ಸೀಸನ್ಗಳನ್ನು ಪೂರ್ಣಗೊಳಿಸಿದೆ. ಅಲ್ಲದೆ, ಇತ್ತೀಚೆಗೆ ಒಟಿಟಿ ಸಹ ಪ್ರಾರಂಭಿಸಲಾಗಿದೆ.
ಸದ್ಯ ಬಿಗ್ ಬಾಸ್ ಒಟಿಟಿ ಸೀಸನ್ 3 ಚಾಲನೆಯಲ್ಲಿದೆ. ಶೋನಲ್ಲಿರುವ ಸ್ಪರ್ಧಿಗಳು ಬಹುತೇಕ ಫೈರ್ ಬ್ರ್ಯಾಂಡ್ಗಳು. ಯಾವುದೇ ಕಾರಣಕ್ಕೂ ವಿವಾದವನ್ನು ಸೃಷ್ಟಿಸಬಲ್ಲವರು. ಪ್ರದರ್ಶನಗಳಿಗೆ ಹೋಲಿಸಿದರೆ, ಕಿರುಚಾಟವೇ ಸ್ವಲ್ಪ ಹೆಚ್ಚು ತೀವ್ರವಾಗಿರುತ್ತದೆ. ಇದೀಗ ಶೋ ಮತ್ತೊಂದು ಹಂತ ತಲುಪಿದೆ. ಏಕೆಂದರೆ, ಸ್ಪರ್ಧಿಯೊಬ್ಬರು ಸಹ ಸ್ಪರ್ಧಿಗೆ ಕಪಾಳಮೋಕ್ಷ ಮಾಡಿದ್ದಾನೆ.
ಜನಪ್ರಿಯ ಯೂಟ್ಯೂಬರ್ ಅರ್ಮಾನ್ ಮಲಿಕ್ ತಮ್ಮ ಇಬ್ಬರು ಪತ್ನಿಯರೊಂದಿಗೆ ಬಿಗ್ ಬಾಸ್ ಒಟಿಟಿ ಸೀಸನ್ 3ರಲ್ಲಿ ಭಾಗವಹಿಸಿದ್ದಾರೆ. ಆದರೆ, ಇತ್ತೀಚೆಗಷ್ಟೇ ಮೊದಲ ಪತ್ನಿ ಪಾಯಲ್ ಶೋನಿಂದ ಎಲಿಮಿನೇಟ್ ಆಗಿದ್ದಾರೆ. ಆದರೆ, ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಆಕೆಯನ್ನು ಅತಿಥಿಯಾಗಿ ಕರೆತರಲಾಗಿತ್ತು. ಆಕೆ ಮತ್ತೆ ಬಿಗ್ಬಾಸ್ ವೇದಿಕೆಗೆ ಬಂದ ತಕ್ಷಣ ನಿರೂಪಕ ಅನಿಲ್ ಕಪೂರ್ ಮುಂದೆ ಯೂಟ್ಯೂಬರ್ ವಿಶಾಲ್ ಸಿಡಿಮಿಡಿಗೊಂಡರು. ಲವ್ ಕಟಾರಿಯಾ ಜತೆಗಿನ ವಿಶಾಲ್ ರಹಸ್ಯ ಸಂಭಾಷಣೆಯನ್ನು ಪಾಯಲ್ ಬಹಿರಂಗಪಡಿಸಿದರು. ಕೃತಿಕಾ ಸಖತ್ತಾಗಿದ್ದಾಳೆ ಎಂದು ಲವ್ ಕಟಾರಿಯಾ ಕಿವಿಯಲ್ಲಿ ವಿಶಾಲ್ ಪಿಸುಗುಟ್ಟಿದ್ದರು. ಮತ್ತೊಂದು ವಿಡಿಯೋದಲ್ಲಿ, ಕೃತಿಕಾ ಅವರು ವರ್ಕೌಟ್ ಮಾಡುತ್ತಿರುವಾಗ ವಿಶಾಲ್ ಅವರನ್ನು ನೋಡುತ್ತಾ, ಅರ್ಮಾನ್ ಕಡೆಗೆ ಮುಖ ಮಾಡಿ 'ಭಾಯ್ ಭಾಗ್ಯಶಾಲಿ (ಲಕ್ಕಿ ಬ್ರದರ್) ಎಂದು ಕಾಮೆಂಟ್ ಮಾಡಿದ್ದರು.
ವಿಶಾಲ್ ಮಾಡಿದ ಕಾಮೆಂಟ್ ಅನ್ನು ಪಾಯಲ್ ಎಲ್ಲರ ಗಮನಕ್ಕೆ ತಂದಾಗ ವೇದಿಕೆಯಲ್ಲಿ ವಾಗ್ವಾದ ನಡೆಯಿತು. ಈ ವೇಳೆ ನಾನು ಕೆಟ್ಟ ಉದ್ದೇಶದಿಂದ ಹೇಳಿಲ್ಲ ಎಂದು ವಿಶಾಲ್ ಸಮರ್ಥಿಸಿಕೊಂಡರು. ತಪ್ಪು ಉದ್ದೇಶವಿಲ್ಲದಿದ್ದರೆ ಅವಳಿಗೆ ನೇರವಾಗಿ ಹೇಳಬೇಕಿತ್ತು ಎಂದು ಪಾಯಲ್ ವಾದ ಮಾಡಿದರು. ಇದಾದ ಬಳಿಕ ಅರ್ಮಾನ್, ವಿಶಾಲ್ ಬಳಿಗೆ ಬರುತ್ತಾರೆ. ನೀವು ನಿಜವಾಗಿ ಏನು ಹೇಳಿದ್ದೀರಿ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಕೃತಿಕಾ ಚೆನ್ನಾಗಿದ್ದಾಳೆ ಎಂದು ವಿಶಾಲ್ ಹೇಳುತ್ತಾರೆ. ಇದರಿಂದ ಆಕ್ರೋಶಗೊಂಡ ಅರ್ಮಾನ್, ತಕ್ಷಣ ವಿಶಾಲ್ ಕೆನ್ನೆಗೆ ಬಾರಿಸುತ್ತಾರೆ. ಇದನ್ನು ನೋಡಿದ ಸ್ಪರ್ಧಿಗಳಿಗೆ ಸ್ವಲ್ಪ ಹೊತ್ತು ಏನೂ ಅರ್ಥವಾಗಲಿಲ್ಲ. ಕೂಡಲೇ ಇಬ್ಬರನ್ನೂ ಕರೆದುಕೊಂಡು ಹೋಗಲಾಯಿತು.
ಈ ವಿಷಯ ಈಗ ನೆಟ್ಟಿಗರು ಹಾಗೂ ಬಿ ಟೌನ್ನಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕೆಲವು ವಿಶಾಲ್ ಬೆಂಬಲಿಸುತ್ತಿದ್ದಾರೆ. ಕೃತಿಕಾರ ಸೌಂದರ್ಯವನ್ನು ಹೊಗಳಿದರು. ಇದರಲ್ಲಿ ತಪ್ಪೇನಿದೆ ಎಂದು ನೆಟ್ಟಿಗರು ಕೂಡ ಪ್ರಶ್ನಿಸುತ್ತಿದ್ದಾರೆ. ಅರ್ಮಾನ್ ಅವರನ್ನು ಕೂಡಲೇ ಮನೆಯಿಂದ ಹೊರಗೆ ಕಳುಹಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಬಿಗ್ ಬಾಸ್ ನಿಯಮದ ಪ್ರಕಾರ ಯಾವುದೇ ಸ್ಪರ್ಧಿ ಮತ್ತೊಬ್ಬರ ಮೇಲೆ ದೈಹಿಕ ಹಲ್ಲೆ ಮಾಡಬಾರದು. ಹೀಗಾಗಿ ಅರ್ಮಾನ್ರನ್ನು ಕೂಡಲೇ ಮನೆಯಿಂದ ಹೊರಹಾಕಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. (ಏಜೆನ್ಸೀಸ್)