ಪಾಪ ನಟಸಾರ್ವಭೌಮನ ಬೆಡಗಿಯ ಫೇಸ್​ಬುಕ್​ ಹ್ಯಾಕ್​ ಮಾಡಿರುವ ವ್ಯಕ್ತಿ ಹೀಗಾ ಮಾಡೋದು? ಅದೂ ಕರೊನಾ ಲಾಕ್​ಡೌನ್ ಹೊತ್ತಲ್ಲಿ!!

anupmaaaa
Published on

ಸಿನಿಮಾ ತಾರೆಯರ ಸಾಮಾಜಿಕ ಜಾಲತಾಣಗಳು ಆಗಾಗ ಹ್ಯಾಕ್​ ಆಗೋದು ಕಾಮನ್​. ಕೆಲ ಕಾಲ ಗಲಿಬಿಲಿ ಸೃಷ್ಟಿಸಿ ಆತಂಕ ಮೂಡಿಸಿ ಸೆಲೆಬ್ರಿಟಿಗಳನ್ನು ತಬ್ಬಿಬ್ಬು ಮಾಡಿಬಿಡುತ್ತಾರೆ ಚಾಲಾಕಿ ಹ್ಯಾಕರ್​ಗಳು. ಈಗ ಬಹುಭಾಷಾ ನಟಿ, ನಟ ಸಾರ್ವಭೌಮನ ಒಡತಿ ಅನುಪಮಾ ಪರಮೇಶ್ವರನ್​ ಅವರ ಫೇಸ್​ಬುಕ್​ ಖಾತೆಯನ್ನು ಹ್ಯಾಕ್​ ಮಾಡಿದ್ದಾರೆ. ಅಷ್ಟೇ ಅಲ್ಲ ಒಂದಷ್ಟು ಫೋಟೋಗಳಿಗೆ ಮಾರ್ಕ್​ ಮಾಡಿ ಅಪ್ಲೋಡ್​ ಮಾಡಿದ್ದಾರೆ. ಈ ವಿಚಾರ ಅನುಪಮಾ ಗಮನಕ್ಕೆ ಬಂದಿದ್ದೇ ತಡ, ಸಾಮಾಜಿಕ ಜಾಲತಾಣದಲ್ಲಿ ಯಾರೋ ಈಡಿಯಟ್​ವೊಬ್ಬ ನನ್ನ ಫೇಸ್​ಬುಕ್​ ಖಾತೆ ಹ್ಯಾಕ್​ ಮಾಡಿದ್ದಾನೆ. ಹಾಗಾಗಿ ಅದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದಿದ್ದಾರೆ.
ಅಷ್ಟೇ ಅಲ್ಲ ಹ್ಯಾಕರ್​ಗೆ ಚೆನ್ನಾಗಿ ಕ್ಲಾಸ್​ ಸಹ ತೆಗೆದುಕೊಂಡಿದ್ದಾರೆ ಅನುಪಮಾ. ನಿಮ್ಮ ಮನೆಯಲ್ಲಿ ಅಮ್ಮ, ಅಕ್ಕತಂಗಿಯರು ಇಲ್ಲವಾ. ನಿಮ್ಮ ಬುದ್ಧಿಯನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಿ. ಇಂಥ ಕೆಟ್ಟ ಕೆಲಸಕ್ಕಲ್ಲ.. ಎಂದು ಆತನ ಚಳಿ ಬಿಡಿಸಿದ್ದಾರೆ. ಅಂದಹಾಗೆ, ಅನುಪಮಾ ಪರಮೇಶ್ವರನ್​ ನಟಸಾರ್ವಭೌಮ ಸಿನಿಮಾ ಮೂಲಕ ಕನ್ನಡಕ್ಕೆ ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net