More

    ರಾಜ್​ ನೀವು ಎಂದಿಗೂ ಅಜರಾಮರ; ಅಣ್ಣಾವ್ರ ಪುಣ್ಯಸ್ಮರಣೆ ಪ್ರಯುಕ್ತ ‘ಆಮ್ಲೆಟ್​’ ಚಿತ್ರತಂಡದಿಂದ ಸಣ್ಣ ಪ್ರಯತ್ನ

    ಬೆಂಗಳೂರು: ಇಂದಿಗೆ ವರನಟ ಡಾ. ರಾಜ್​ ನಮ್ಮನ್ನಗಲಿ 14 ವರ್ಷಗಳು ಕಳೆದಿವೆ. ಇಂದಿಗೂ ಅವರು ನಮ್ಮ ನಡುವೆಯೇ ಇದ್ದಾರೆ. ಅವರ ಸಿನಿಮಾಗಳು ಮತ್ತು ಗೀತೆಗಳು ಅವರನ್ನು ಜೀವಂತವಾಗಿಸಿವೆ. ಶಾರೀರಿಕವಾಗಿ ಅವರಿಲ್ಲ ಎಂಬುದನ್ನು ಹೊರತುಪಡಿಸಿದರೆ, ಮಾನಸಿಕವಾಗಿ ಎಲ್ಲರ ನಡುವಿದ್ದಾರೆ. ಪ್ರತಿ ಅಭಿಮಾನಿಗಳ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ. ಹೀಗಿರುವಾಗ ಇಂದು ಅವರ ಪುಣ್ಯಸ್ಮರಣೆ. ಪ್ರತಿ ವರ್ಷ ಅವರ ಸಮಾಧಿ ಬಳಿ ಸಾವಿರಾರು ಅಭಿಮಾನಿಗಳು ಸೇರಿ ಆಶೀರ್ವಾದ ಪಡೆದು ಬರುತ್ತಿದ್ದರು. ಆದರೆ ಈ ವರ್ಷ ಅದಕ್ಕೆ ಕರೊನಾ ಅಡ್ಡಿ ಪಡಿಸಿದೆ. ಈ ನಡುವೆ ಹಲವು ಸಿನಿಮಾ ತಂಡಗಳು ಅಣ್ಣಾವ್ರ ಸಿನಿಮಾಗಳ ಬಗೆಬಗೆ ಫೋಟೋಗಳನ್ನು ಒಟ್ಟುಗೂಡಿಸಿ ಅವರಿಗೆ ನಮನ ಸಲ್ಲಿಸುತ್ತಿವೆ. ಆ ಪೈಕಿ ‘ಆಮ್ಲೆಟ್’​ ಚಿತ್ರತಂಡ ಡಾ. ರಾಜ್​ ಅಭಿನಯದ 21 ಸಿನಿಮಾಗಳ ಫೋಟೋಗಳನ್ನು ಬಳಸಿಕೊಂಡು ಪೋಸ್ಟರ್​ ಸಿದ್ಧಪಡಿಸಿದೆ. 21 ಸಿನಿಮಾಗಳಲ್ಲಿ ಡಾ. ರಾಜ್​ ಅವರ ವಿಭಿನ್ನ ವೇಷಭೂಷಣವನ್ನು ಕಾಣಬಹುದಾಗಿದೆ. ಆ ವಿಶೇಷವಾದ ಫೋಟೋ ಇಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts