ಇದರ ಮಧ್ಯೆ ಚೆನ್ನೈನ ಹೋಟೆಲೊಂದರಲ್ಲಿ ನಡೆದಿದೆ ಎನ್ನಲಾದ ಕಹಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಹೋಟೆಲ್ನಲ್ಲಿ ಅನುಪಮಾ ಮತ್ತು ಧ್ರುವ್ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಕೋಪಗೊಂಡ ಅನುಪಮಾ, ಧ್ರುವ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಧ್ರುವ್ ಅವರ ನಡವಳಿಕೆಯನ್ನು ಅನುಪಮಾ ಪ್ರಶ್ನಿಸಿದ್ದೇ ಈ ಗಲಾಟೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.