ಸುದೀಪ್​ ಹುಟ್ಟುಹಬ್ಬಕ್ಕೆ 'ಕೋಟಿಗೊಬ್ಬ 3' ಚಿತ್ರದ ಇನ್ನೊಂದು ಟೀಸರ್​

Kotigobba 3 - Final
Published on

ಸುದೀಪ್​ ಹುಟ್ಟುಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ. ಸೆಪ್ಟೆಂಬರ್​ 2ರಂದು ಸುದೀಪ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಬಾರಿಯ ಹುಟ್ಟುಹಬ್ಬವನ್ನು ಬಹಳ ಗ್ರಾಂಡ್​ ಆಗಿ ಆಚರಿಸುವುದಕ್ಕೆ ಅವರ ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಈ ಮಧ್ಯೆ, ಸುದೀಪ್​ ಅಭಿನಯದ 'ಫ್ಯಾಂಟಮ್​' ಮತ್ತು 'ಕೋಟಿಗೊಬ್ಬ 3' ಚಿತ್ರಗಳಿಂದಲೂ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಗಿಫ್ಟ್​ಗಳು ಸಿಗುವ ನಿರೀಕ್ಷೆ ಇದೆ. ಸದ್ಯಕ್ಕೆ 'ಫ್ಯಾಂಟಮ್​' ಚಿತ್ರತಂಡದವರು ಏನು ಗಿಫ್ಟ್​ ಕೊಡಬಹುದು ಎಂಬ ವಿಷಯ ಬಹಿರಂಗವಾಗಿಲ್ಲ. ಆದರೆ, 'ಕೋಟಿಗೊಬ್ಬ 3' ಚಿತ್ರತಂಡದಿಂದ ಹೊಸ ಟೀಸರ್​ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

ಸುದೀಪ್​ ಅಭಿನಯದ 'ಕೋಟಿಗೊಬ್ಬ 3' ಚಿತ್ರದಿಂದ ಯಾವುದೇ ಅಪ್​ಡೇಟ್​ಗಳಿಲ್ಲ ಎಂದು ಅಭಿಮಾನಿಗಳು ಕೆಲವು ದಿನಗಳಿಂದ ಬೇಸರ ಮಾಡಿಕೊಳ್ಳುತ್ತಲೇ ಇದ್ದಾರೆ. ಈ ಹಿಂದೆ ಒಂದು ಲಿರಿಕಲ್​ ಹಾಡು ಮತ್ತು ಟೀಸರ್​ ಬಿಟ್ಟರೆ, ಬೇರೇನೂ ಬಿಡುಗಡೆಯಾಗಿಲ್ಲ. ಈ ಮಧ್ಯೆ, ಚಿತ್ರದ ಒಂದು ಪೋಸ್ಟರ್​ ಬಿಡುಗಡೆಯಾಗಿದ್ದು, ಅಭಿಮಾನಿಗಳು ಅದಕ್ಕೆ ಖುಷಿಪಡಬೇಕಾಯಿತು.

ಇದೀಗ 'ಕೋಟಿಗೊಬ್ಬ 3' ಚಿತ್ರತಂಡದಿಂದ ಇನ್ನೊಂದು ಟೀಸರ್​ ಬಿಡುಗಡೆಯಾಗುತ್ತಿದೆ. ಈ ಹಿಂದೆ ಬಿಡುಗಡೆಯಾದ ಟೀಸರ್​ ಜನಪ್ರಿಯವಾಗುವುದರ ಜತೆಗೆ, ಲಕ್ಷಾಂತರ ಹಿಟ್ಸ್​ಗಳು ಸಿಕ್ಕಿತ್ತು. ಈಗ ಚಿತ್ರದ ಇನ್ನೊಂದು ಟೀಸರ್​ ಯಾವ ಮ್ಯಾಜಿಕ್​ ಮಾಡುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.

'ಕೋಟಿಗೊಬ್ಬ 3' ಚಿತ್ರದಲ್ಲಿ ಸುದೀಪ್​, ಅಫ್ತಾಬ್​ ಶಿವದಾಸಾನಿ, ರವಿಶಂಕರ್​ ಮುಂತಾದವರು ನಟಿಸಿದ್ದಾರೆ. ಶಿವಕಾರ್ತಿಕ್​ ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಇನ್ನು ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದು, ಬಿಡುಗಡೆಯಾದ ಒಂದು ಹಾಡು ಜನಪ್ರಿಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net