ಆ್ಯಂಕರ್​ ಅನುಶ್ರೀ ಸೈತಾನ್ ಸಹವಾಸ

Anushree
Published on

ಬೆಂಗಳೂರು: ನಿರೂಪಕಿ ಅನುಶ್ರೀ ಬಹು ವರ್ಷಗಳ ಬಳಿಕ ಸಿನಿಮಾವೊಂದನ್ನು ಮಾಡುತ್ತಿರುವ ವಿಚಾರ ಕೆಲ ದಿನಗಳ ಹಿಂದಷ್ಟೇ ಬಹಿರಂಗವಾಗಿತ್ತು. ಆದರೆ, ಈ ಹಾರರ್ ಚಿತ್ರದ ಶೀರ್ಷಿಕೆ ಬಹಿರಂಗವಾಗಿರಲಿಲ್ಲ. ಇದೀಗ ಆ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ಸಿನಿಮಾಕ್ಕೆ ‘ಸೈತಾನ್’ ಎಂಬ ಶೀರ್ಷಿಕೆ ಅಂತಿಮವಾಗಿದ್ದು, ಚಂದನವನದ ಚೆಂದದ ನಟಿಯರಿಂದಲೇ ಟೈಟಲ್ ಅನಾವರಣಗೊಂಡಿದೆ.

‘ಮಮ್ಮಿ’ ಸಿನಿಮಾ ನಿರ್ದೇಶಿಸಿದ್ದ ಲೋಹಿತ್, ಪಾರ್ಥಿಬನ್ ಮತ್ತು ಪುನೀತ್ ಜತೆಗೆ ಸೇರಿ ಈ ಚಿತ್ರ ನಿರ್ವಿುಸುತ್ತಿದ್ದಾರೆ. ಲೋಹಿತ್ ಜತೆಗೆ ಕೆಲಸ ಮಾಡಿದ್ದ ಪ್ರಭಾಕರ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಈ ಸಿನಿಮಾ ಬಗ್ಗೆ ತುಂಬ ಎಗ್ಸೈಟ್​ ಆಗಿರುವ ಅನುಶ್ರೀ, ‘‘ಉಪು್ಪ ಹುಳಿ ಖಾರ’ ಸಿನಿಮಾ ಬಳಿಕ ಮತ್ತೆ ಹಿರಿತೆರೆಗೆ ಬರುತ್ತಿದ್ದೇನೆ. ಚಿತ್ರದ ಕಥೆ ಕೇಳಿಯೇ ತುಂಬ ಥ್ರಿಲ್ ಎನಿಸಿ ನಟಿಸಲು ಒಪ್ಪಿಕೊಂಡಿದ್ದೇನೆ. ನಾಯಕ, ನಾಯಕಿ ಎಂಬ ಪರಿಕಲ್ಪನೆ ಇಲ್ಲಿಲ್ಲ. ಕಥೆಯೇ ಇಲ್ಲಿ ಹೀರೋ’ ಎಂಬುದು ಅವರ ಮಾತು. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದ್ದು, ಈ ತಿಂಗಳಾಂತ್ಯಕ್ಕೆ ಗೋವಾದಲ್ಲಿ ಎರಡನೇ ಹಂತದ ಶೂಟಿಂಗ್ ನಡೆಯಲಿದೆ. ಈ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮಕ್ಕೆ ನಟಿಯರಾದ ಅದಿತಿ ಪ್ರಭುದೇವ, ಭಾವನಾ ರಾವ್ ಮುಂತಾದವರು ಆಗಮಿಸಿ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net