ಬೆಂಗಳೂರು: ಖ್ಯಾತ ನಟಿ, ನಿರೂಪಕಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಅವರು ಒಂದು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ನಟಿಯ ಈ ಹೊಸ ಹೇರ್ ಸ್ಟೈಲ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಅನುಪಮಾ ಗೌಡ ಅವರು ಇಷ್ಟು ವರ್ಷಗಳ ಕಾಲ ಉದ್ದ ಕೂದಲಿನಲ್ಲಿ ಮಿಂಚುತ್ತಿದ್ದರು, ಆದರೆ, ಇದೀಗ ನಟಿ ತಾವು ಪ್ರೀತಿಯಿಂದ ಬೆಳೆಸಿಕೊಂಡಿದ್ದ ಉದ್ದ ಕೂದಲನ್ನು ಕತ್ತರಿಸಿಕೊಂಡಿದ್ದಾರೆ. ಅನುಪಮಾ ಅವರ ಒಂದು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ತಾವು ಕೂದಲನ್ನು ಕತ್ತರಿಸಿಕೊಂಡಿರುವ ಹಾಗೆ ತಿಳಿಸಿದ್ದಾರೆ.