ಹುಡುಗರಿಗೆ ಪೈಪೋಟಿ… ವೇದಿಕೆ ಮೇಲೆಯೇ ಬಟ್ಟೆ ಬಿಚ್ಚಿದ ನಟಿ, ನಿರೂಪಕಿ ಅನಸೂಯ ಭಾರದ್ವಜ್​!

Anasuya Bharadwaj
Published on

ಹೈದರಾಬಾದ್​: ಭಾನುವಾರ (ಜೂನ್​ 23) ಸ್ಟಾರ್ ಮಾ ವಾಹಿನಿಯಲ್ಲಿ 'ಡಾನ್ಸ್ 2.0 ನಿಮ್ಮೊಂದಿಗೆ' ಕಾರ್ಯಕ್ರಮ ಮುಕ್ತಾಯವಾಗಲಿದೆ. ಸೆಪ್ಟೆಂಬರ್​ನಿಂದ ಬಿಗ್ ಬಾಸ್ ಸೀಸನ್ 8 ಆರಂಭವಾಗಲಿದ್ದು, ಅಲ್ಲಿಯವರೆಗೆ ಸ್ಟಾರ್ ಮಾ ವಾಹಿನಿಯಲ್ಲಿ ಮತ್ತೊಂದು ಗೇಮ್ ಶೋ ಆರಂಭವಾಗಲಿದೆ.

ಕಿರಿಕ್​ ಬಾಯ್ಸ್ ಕಿಲಾಡಿ ಗರ್ಲ್ಸ್ ಹೆಸರಿನ ಈ ಗೇಮ್ ಶೋ ಜೂನ್ 29 ರಿಂದ ಶನಿವಾರ ಮತ್ತು ಭಾನುವಾರದಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮಕ್ಕೆ ಶ್ರೀಮುಖಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಈ ಗೇಮ್ ಶೋನ ಪ್ರೋಮೋ ಬಿಡುಗಡೆಯಾಗಿದ್ದು, ಖತರ್ನಾಕ್ ಕಿಲಾಡಿ ಆಗಿರುವ ಅನಸೂಯಾ ಪ್ರೋಮೋದಲ್ಲಿ ಗಮನ ಸೆಳೆದಿದ್ದಾರೆ. ಈ ಗೇಮ್​ನಲ್ಲಿ ಹುಡುಗಿಯರ ತಂಡಕ್ಕೆ ಅನಸೂಯ ಟೀಮ್ ಲೀಡರ್ ಆಗಿದ್ದರೆ, ಹುಡುಗರ ತಂಡಕ್ಕೆ ಶೇಖರ್ ಮಾಸ್ಟರ್ ಟೀಮ್ ಲೀಡರ್ ಆಗಿದ್ದಾರೆ.

ಗೇಮ್​ನ ಅಂಗವಾಗಿ ಅನಸೂಯ ಅವರು ಹುಡುಗಿಯರ ಪರವಾಗಿ ನಿಂತು ಹುಡುಗರಿಗೆ ಸವಾಲೆಸೆದಿದ್ದಾರೆ. ಹುಡುಗಿಯರನ್ನು ಸೋಲಿಸುವ ಹುಡುಗ ಹುಟ್ಟಿಲ್ಲ ಎಂದಿದ್ದಾರೆ. ಪ್ರೋಮೋದಲ್ಲಿ ಎರಡು ತಂಡಗಳ ನಡುವೆ ಭಾರೀ ಪೈಪೋಟಿಯೇ ಏರ್ಪಟ್ಟಿದೆ. ಪ್ರೋಮೋದ ಕೊನೆಯಲ್ಲಿ ಅನಸೂಯಾ ಅವರು ಶೇಖರ್ ಮಾಸ್ಟರ್​ಗೆ ಪೈಪೋಟಿ ನೀಡಿ, ಜಾಕೆಟ್ ಬಿಚ್ಚುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಒಮ್ಮೆಲೇ ದಂಗಾಗಿದ್ದಾರೆ. ಬಟ್ಟೆ ಬಿಚ್ಚುವುದನ್ನು ಖಂಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ಇದು ಪ್ರೋಮೋ ಆಗಿದ್ದು, ಪೂರ್ತಿ ಎಪಿಸೋಡ್​ ಪ್ರಸಾರವಾದಾಗ ಬಟ್ಟೆ ಬಿಚ್ಚುವ ಪೈಪೋಟಿಗೆ ಒಂದು ಸ್ಪಷ್ಟತೆ ಸಿಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net