ಸದ್ಯ ಚಿತ್ರರಂಗದಲ್ಲಿ ಫುಲ್ ಬಿಜಿಯಾಗಿರುವ ಅನಸೂಯಾ ಭಾರದ್ವಾಜ್ ಅವರ ಕೈಯಲ್ಲಿ ಕೆಲವು ಪ್ರಮುಖ ಸಿನಿಮಾಗಳಿವೆ. ಮುಂಬರುವ ದೊಡ್ಡ ಬಜೆಟ್‌ನ ಸಾಹಸ ಮತ್ತು ಥ್ರಿಲ್ಲರ್ ಚಿತ್ರವಾದ 'ನಾಗಬಂಧಂ: ದಿ ಸೀಕ್ರೆಟ್ ಟ್ರೆಷರ್' ಸಿನಿಮಾದಲ್ಲಿ ಅವರು 'ಲೀಲಾವತಿ' ಎಂಬ ಅತ್ಯಂತ ಶಕ್ತಿಶಾಲಿ ಹಾಗೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾದ ಅವರ ಫಸ್ಟ್‌ಲುಕ್ ಪೋಸ್ಟರ್ ಭಾರಿ ಸೌಂಡ್ ಮಾಡಿದೆ. ಇದರೊಂದಿಗೆ, ಅವರ ಬಹುನಿರೀಕ್ಷಿತ ಚಿತ್ರವಾದ 'ಅರಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಲ್ಲದೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಲಿರುವ 'ಪುಷ್ಪ 3' ಚಿತ್ರದಲ್ಲೂ ಅವರು ತಮ್ಮ ದಕ್ಷಾಯಿಣಿ ಪಾತ್ರವನ್ನು ಮುಂದುವರಿಸಲಿದ್ದು, ತಮಿಳಿನ 'ವುಲ್ಫ್' ನಂತಹ ಬಹುಭಾಷಾ ಪ್ರಾಜೆಕ್ಟ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ, (ಏಜೆನ್ಸೀಸ್).