ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಾಗಿ, ಈ ಜೋಡಿಗೆ ಶುಭವಾಗಲಿ ಎಂದು ಅಭಿಮಾನಿ ಬಳಗ, ಸಿನಿತಾರೆಯರು ಎಲ್ಲರು ಶುಭ ಹಾರೈಸುತ್ತಿದ್ದಾರೆ. ಇನ್ನು, ಈಗಾಗಲೇ ನಟಿಯ ಸೀಮಂತ, ಬೇಬಿ ಬಂಪ್, ಮಾಮ್ ಟು ಬಿ ಪಾರ್ಟಿಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದರ ನಡುವೆ, ನಟಿ ಅಮೂಲ್ಯಗೆ ಕನ್ನಡ ಚಿತ್ರರಂಗದವರು ಬಹುತೇಕ ಎಲ್ಲರೂ ಸೇರಿ ಬೆಂಗಳೂರಿನ ಒಂದು ಖಾಸಗಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ಬೇಬಿ ಶವರ್ ಕಾರ್ಯಕ್ರಮ ಆಯೋಜಿಸಿದರು. ಈ ಕಾರ್ಯಕ್ರಮಕ್ಕೆ ಇಡೀ ಕನ್ನಡ ಚಿತ್ರರಂಗ ಭಾಗಿಯಾದಂತೆ ಕಾಣುತ್ತಿತ್ತು.