ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ಅಮಿತಾಭ್​ … ಬೆಲೆ ಎಷ್ಟು ಹೇಳಿ?

Amitabh Bachchan - Final
Published on

ಮುಂಬೈ: ಬಾಲಿವುಡ್​ ಬಿಗ್​ಬಿ ಅಮಿತಾಭ್​ ಬಚ್ಚನ್​, ಈಗಾಗಲೇ ಮುಂಬೈನಲ್ಲಿ ಜಲ್ಸ, ಪ್ರತೀಕ್ಷ, ಜನಕ್​, ವತ್ಸ ಸೇರಿದಂರರೆ ಐದು ಹಾಗೂ ದುಬೈನಲ್ಲಿ ಒಂದು ಮನೆಗಳನ್ನು ಹೊಂದಿದ್ದಾರೆ. ಈಗ ಅವರು ಇನ್ನೂ ಒಂದು ಹೊಸ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

ಪ್ರಾಜೆಕ್ಟ್​ ಅಟ್ಲಾಂಟಿಸ್ ಎಂಬ ಅಪಾರ್ಟ್​ಮೆಂಟ್​ನ 27 ಮತ್ತು 28 ನೇ ಮಹಡಿಗೆ ಹೊಂದಿಕೊಂಡಂತೆ ಇರುವ ಈ ಮನೆಯು 5,184 ಚದುರಡಿ ವಿಸ್ತೀರ್ಣದಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಮನೆಗೆ ಆರು ಕಾರ್​ ಪಾರ್ಕಿಂಗ್​ ನೀಡಲಾಗಿದೆ. 2020ರ ಡಿಸೆಂಬರ್​ನಲ್ಲೇ ಅಮಿತಾಭ್​ ಬಚ್ಚನ್​ ಈ ಮನೆಯನ್ನು ಖರೀದಿಸಿದ್ದರಂತೆ. ಕಳೆದ ತಿಂಗಳು ಅಂದರೆ ಏಪ್ರಿಲ್​ನಲ್ಲಿ ಈ ಮನೆಯ ರಿಜಿಸ್ಟ್ರೇಶನ್​ ಆಗಿದೆ.

ಅಂದಹಾಗೆ, ಈ ಮನೆಗೆ ಅಮಿತಾಭ್​ ಬಚ್ಚನ್​ ಎಷ್ಟು ಕೊಟ್ಟರು ಎಂಬ ಪ್ರಶ್ನೆ ಸಹ. ಮೂಲಗಳ ಪ್ರಕಾರ, ಬರೋಬ್ಬರಿ 31 ಕೋಟಿ ರೂಗಳನ್ನು ಕೊಟ್ಟು ಅಮಿತಾಭ್​ ಈ ಮನೆ ಖರೀದಿಸಿದ್ದಾರಂತೆ. ಈಗಿರುವ ಇಷ್ಟು ಮನೆಗಳನ್ನು ಬಿಟ್ಟು, ಅವರು ಆ ಮನೆಗೆ ಹೋಗಿ ವಾಸವಿರುತ್ತಾರೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಇದೊಂದು ಒಳ್ಳೆಯ ಹೂಡಿಕೆ ಎಂದು ಹೇಳಲಾಗುತ್ತಿದೆ.

ಬರೀ ಅಮಿತಾಭ್​ ಅಷ್ಟೇ ಅಲ್ಲ, ಈ ಅಪಾರ್ಟ್​ಮೆಂಟ್​ನಲ್ಲಿ ಇನ್ನೂ ಒಂದಿಷ್ಟು ಸೆಲೆಬ್ರಿಟಿಗಳಿದ್ದಾರೆ. ಪ್ರಮುಖವಾಗಿ ಸನ್ನಿ ಲಿಯೋನ್​, ಈ ಅಪಾರ್ಟ್​ಮೆಂಟ್​ನಲ್ಲಿ 16 ಕೋಟಿ ಕೊಟ್ಟು ಒಂದು ಮನೆ ಖರೀದಿಸಿದ್ದಾರಂತೆ. ಇದಲ್ಲದೆ, ಜೀರೋ ನಿರ್ದೇಶಕ ಆನಂದ್​ ಎಲ್​ ರೈ ಸಹ ಇಲ್ಲಿ ಡ್ಯೂಪ್ಲೆಕ್ಸ್​ ಅಪಾರ್ಟ್​ಮೆಂಟ್ ಖರೀದಿಸಿದ್ದಾರೆ ಎಂಬ ಸುದ್ದಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net