ನಿರ್ದೇಶಕ ಪ್ರಶಾಂತ್ ನೀಲ್ ಸಂಭಾವನೆ 10 ಕೋಟಿ ರೂ.?

Neel
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೀರೋಗಳ ಸಂಭಾವನೆ ಚಿತ್ರದಿಂದ ಚಿತ್ರಕ್ಕೆ ಏರುತ್ತಿದ್ದರೂ, ನಿರ್ದೇಶಕರ ಸಂಭಾವನೆ ಮಾತ್ರ ಇದುವರೆಗೂ ಕೋಟಿ ದಾಟಲೇ ಇಲ್ಲ ಎಂಬ ಮಾತಿದೆ. ಆದರೆ, ಅದನ್ನು ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ಸುಳ್ಳು ಮಾಡುವುದಕ್ಕೆ ಹೊರಟಿದ್ದಾರೆ. ಜ್ಯೂನಿಯರ್ ಎನ್​ಟಿಆರ್ ಅಭಿನಯದ ಹೊಸ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದು, ಆ ಚಿತ್ರಕ್ಕಾಗಿ 10 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ಪಕ್ಷ ಇದು ನಿಜವೇ ಆದರೆ, ಕನ್ನಡ ನಿರ್ದೇಶಕರ ಪೈಕಿ ಅತೀ ಹೆಚ್ಚು ಸಂಭಾವನೆ ಪಡೆದ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪ್ರಶಾಂತ್ ನೀಲ್ ಪಾತ್ರವಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net