

ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಲೇ ಇದೆ. ಯಾವಾಗ ಮೊಮ್ಮಗಳು ಆರಾಧ್ಯ ಬಚ್ಚನ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಚ್ಚನ್ ಕುಟುಂಬ ಕಾಣಿಸಿಕೊಳ್ಳಲಿಲ್ಲ. ಆ ನಂತರ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳನ್ನು ಜನರು ನಂಬಲು ಪ್ರಾರಂಭಿಸಿದ್ರು.
ಅಮಿತಾಬ್ ಬಚ್ಚನ್ ನವೆಂಬರ್ 21 ರಂದು ತಮ್ಮ ಬ್ಲಾಗ್‌ನಲ್ಲಿ ಸುದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ. ಈ ಟಿಪ್ಪಣಿಯಲ್ಲಿ, ತಾವು ಕುಟುಂಬದ ಬಗ್ಗೆ ಏಕೆ ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದ್ದರು. ಇದೇ ಸಮದರ್ಭ ಅವರು ಆ ಟಿಪ್ಪಣಿಯಲ್ಲಿ ಮಗ ಮತ್ತು ಸೊಸೆಯ ನಡುವೆ ವಿಚ್ಛೇದನದ ಅಸಲಿ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
“ನಾನು ಕುಟುಂಬದ ಬಗ್ಗೆ ತುಂಬಾ ಕಡಿಮೆ ಮಾತನಾಡುತ್ತೇನೆ ಏಕೆಂದರೆ ಅದು ನನ್ನ ಡೊಮೇನ್ ಮತ್ತು ನಾನು ನನ್ನ ಗೌಪ್ಯತೆಯನ್ನು ಕಾಪಾಡುತ್ತೇನೆ. ವದಂತಿಗಳು ಕೇವಲ ವದಂತಿಗಳು. ಇವು ಸುಳ್ಳು ವದಂತಿಗಳಾಗಿದ್ದು, ದೃಢಪಟ್ಟಿಲ್ಲ. ಅವರ ಆಯ್ಕೆಯ ವೃತ್ತಿಯನ್ನು ಮುಂದುವರಿಸುವ ಅವರ ನಿರ್ಧಾರವನ್ನು ನಾವು ಅನುಮಾನಿಸಬಾರದು. ಸಮಾಜಕ್ಕೆ ಅವರ ಕೊಡುಗೆಯನ್ನು ಶ್ಲಾಘಿಸಬೇಕು" ಎಂದು ಬರೆದುಕೊಂಡಿದ್ದಾರೆ. ಸದ್ಯ ಅಮಿತಾಬ್ ಬಚ್ಚನ್ ಅವರ ಈ ಟ್ವೀಟ್ ಎಲ್ಲೆಡೆ ವೈರಲ್ ಆಗುತ್ತಲಿದೆ.
ಅಲ್ಲದೇ ಅವರು “ನೀವು ನಿಮಗೆ ಇಷ್ಟವಾದದ್ದನ್ನು ಬರೆಯುತ್ತೀರಿ, ಆದರೆ ನೀವು ಪ್ರಶ್ನಾರ್ಥಕ ಚಿಹ್ನೆಯನ್ನು (?) ಬಳಸುವಾಗ ವರದಿಯು ಪ್ರಶ್ನೆಯನ್ನು ಆಧರಿಸಿದೆ ಎಂದು ನೀವು ಹೇಳುವುದಿಲ್ಲ... ಆದರೆ ಓದುಗರು ಸಹ ಅದನ್ನು ನಂಬಬೇಕೆಂದು ನಾನು ಬಯಸುತ್ತೇನೆ.. ಸುಳ್ಳನ್ನು ಪ್ರಶ್ನಿಸುವ ಮೂಲಕ ನೀವು ನಿಮ್ಮ ಕೆಲಸವನ್ನು ಮಾಡುತ್ತೀರಿ. ಆದರೆ ಅದು ಒಬ್ಬ ವ್ಯಕ್ತಿ ಅಥವಾ ಸನ್ನಿವೇಶದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದೂ ಯೋಚಿಸಿ.." ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಸದ್ಯ ಅಮಿತಾಭ್ ಕುಟುಂಬದ ಬಗ್ಗೆ ಕೇಳಿ ಬರುತ್ತಿರುವ ಮಗ ಮತ್ತು ಸೊಸೆಯ ವಿಚ್ಛೇದನದ ಸುದ್ದಿ ಸುಳ್ಳು ಎಂದು ಈ ಮೂಲಕ ತಿಳಿಸೋಕೆ ಮುಂದಾಗಿದ್ದಾರೆ.