

ಬೆಂಗಳೂರು: ಅಗಲಿ ಕೆಲವು ತಿಂಗಳುಗಳೇ ಕಳೆದರೂ ಮಾಸದ ನೆನಪಾಗಿಯೇ ಉಳಿದಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ನಾಳೆ 'ಪುಷ್ಪ'ನಮನ ಸಲ್ಲಲಿದೆ.
ಅರ್ಥಾತ್, ಇತ್ತೀಚೆಗೆ ತೆರೆಕಂಡ 'ಪುಷ್ಪ' ಚಿತ್ರದಿಂದಾಗಿ ಭಾರಿ ಸುದ್ದಿಯಲ್ಲಿರುವ ತೆಲುಗಿನ ಖ್ಯಾತನಟ ಅಲ್ಲು ಅರ್ಜುನ್ ನಾಳೆ ಕನ್ನಡದ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ಮನೆಗೆ ಭೇಟಿ ನೀಡಲಿದ್ದಾರೆ.
ಆ ಬಳಿಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮನೆಗೂ ತೆರಳಿ ಅವರ ಕುಟುಂಬಸ್ಥರ ಜತೆ ಮಾತನಾಡಲಿರುವ ಅಲ್ಲು ಅರ್ಜುನ್, ನಂತರ ಕಂಠೀರವ ಸ್ಟುಡಿಯೊಗೆ ತೆರಳಲಿದ್ದಾರೆ. ಅಲ್ಲಿ ಅಪ್ಪು ಸಮಾಧಿಗೆ ಪುಷ್ಪಗಳನ್ನು ಅರ್ಪಿಸಿ ನಮನಗಳನ್ನು ಸಲ್ಲಿಸಲಿದ್ದಾರೆ.