''ಪುಷ್ಪ, ತಂಡದ ಪ್ರತಿಯೊಬ್ಬ ಸದಸ್ಯರ ಶ್ರಮದಿಂದ, ಕೆಲಸದಿಂದ ಅಲ್ಲು ಅರ್ಜುನ್ ತುಂಬಾ ಖುಷಿ ಪಟ್ಟಿದ್ದಾರೆ. ಆದ್ದರಿಂದ, ಅವರು ಚಿತ್ರತಂಡಕ್ಕೆ ಚಿನ್ನ ಮತ್ತು ನಗದು ಉಡುಗೊರೆಗಳನ್ನು ನೀಡಿ ಗೌರವಿಸಲು ಬಯಸಿದ್ದರು'' ಎಂದು ತಂಡದ ಸದಸ್ಯರು ಹೇಳಿದ್ದಾರೆ. 'ಪುಷ್ಪ: ದಿ ರೈಸ್' ಡಿಸೆಂಬರ್ 17 ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಈ ಆಕ್ಷನ್-ಥ್ರಿಲ್ಲರ್ ಕಥೆಯನ್ನು ಸುಕುಮಾರ್ ಅವರು ಬರೆದು ನಿರ್ದೇಶಿಸಿದ್ದಾರೆ. ಮುತ್ತಂಸೆಟ್ಟಿ ಮೀಡಿಯಾ ಸಹಯೋಗದೊಂದಿಗೆ ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದ 'ಪುಷ್ಪ'ದಲ್ಲಿ ಅಲ್ಲು ಅರ್ಜುನ್ ಜೊತೆ ನಟ ಫಹಾದ್ ಫಾಸಿಲ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.