ಸಿದ್ಧವಾಗಿದೆ ಶ್ರೀ ಅಲ್ಲಮಪ್ರಭು ಬಯೋಪಿಕ್!; ಸಚಿವ ನಿರಾಣಿ ಅವರಿಂದ ಟೀಸರ್ ಬಿಡುಗಡೆ

AllamaPrabhu
Published on

ಬೆಂಗಳೂರು: ಶೂನ್ಯ ಸಿಂಹಾಸನಾಧೀಶ್ವರ, ವ್ಯೋಮಕಾಯ ಸಿದ್ಧ ಅಲ್ಲಮ ಪ್ರಭು ಅವರ ಜೀವನವನ್ನಾಧರಿಸಿ ನಿರ್ವಣವಾಗಿರುವ ಚಿತ್ರ ‘ಶ್ರೀ ಅಲ್ಲಮಪ್ರಭು’. 12ನೇ ಶತಮಾದ ಈ ಪುಣ್ಯಪುರುಷನ ಕುರಿತಾದ ಈ ಐತಿಹಾಸಿಕ ಚಿತ್ರವು ಇತ್ತೀಚೆಗೆ ಸೆನ್ಸಾರ್ ಆಗಿದ್ದು, ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಮಾಧವಾನಂದ ಶೇಗುಣಸಿ ಕಥೆ, ಚಿತ್ರಕಥೆ ಬರೆದು ಅಮರಜ್ಯೋತಿ ಪಿಕ್ಚರ್ಸ್ ಸಂಸ್ಥೆಯ ಅಡಿಯಲ್ಲಿ ನಿರ್ವಿುಸಿರುವ ಈ ಬಯೋಪಿಕ್​ನ್ನು ಶರಣ್ ಗದ್ವಾಲ್ ನಿರ್ದೇಶಿಸಿದ್ದಾರೆ.

ಇತ್ತೀಚೆಗಷ್ಟೇ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಯವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿಯವರೂ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಟೀಸರ್ ಬಿಡುಗಡೆ ಸಂದರ್ಭದಲ್ಲಿ ನಿರ್ವಪಕ ಮಾಧವಾನಂದ, ಕಲಾವಿದರಾದ ವಿಕ್ರಮ್ ಸೂರಿ, ರಘು ಭಟ್ ಉಪಸ್ಥಿತರಿದ್ದರು.

‘ಶ್ರೀ ಅಲ್ಲಮಪ್ರಭು’ ಚಿತ್ರದಲ್ಲಿ ಸಚಿನ್ ಸುವರ್ಣ, ನೀನಾಸಂ ಅಶ್ವತ್ಥ್, ರಮೇಶ್ ಪಂಡಿತ್, ವಿಕ್ರಮ್ ಸೂರಿ, ರಮೇಶ್ ಪಂಡಿತ್ ಮುಂತಾದವರು ನಟಿಸಿದ್ದು, ಆರ್. ಗಿರಿ ಛಾಯಾಗ್ರಹಣವಿದೆ. ಚಿತ್ರಕ್ಕೆ ಕುಮಾರ್ ಈಶ್ವರ್ ಸಂಗೀತ ಸಂಯೋಜಿಸಿದ್ದು, ಬಿಎಸ್. ಕೆಂಪರಾಜು ಸಂಕಲನವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net