

ಆಲಿಯಾ ಸದ್ಯದಲ್ಲೇ ಹಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರಂತೆ. ಹಾಗಾಂತ ಸುದ್ದಿಯೊಂದು ಕೇಳಿಬರುತ್ತಿದ್ದು, 2022ರಲ್ಲಿ ಆಲಿಯಾ ಅಭಿನಯದ ಮೊದಲ ಇಂಗ್ಲೀಷ್ ಚಿತ್ರ ಸೆಟ್ಟೇರಲಿದೆಯಂತೆ. ಈಗಾಗಲೇ ಆಕೆ ವಿಲಿಯಂ ಮಾರ್ರಿಸ್ ಎಂಡವರ್ ಎಂಬ ಸಂಸ್ಥೆಯ ಜತೆಗೆ ಕೈಜೋಡಿಸಿದ್ದು, ಆ ಸಂಸ್ಥೆಯು ಆಲಿಯಾಗೆ ಹಾಲಿವುಡ್ನಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಸಹಾಯ ಮಾಡಲಿದೆಯಂತೆ.
ಕಲಾವಿದರು ಮತ್ತು ಚಿತ್ರತಂಡಗಳ ನಡುವೆ ಸೇತುವೆಯಂತೆ ಕೆಲಸ ಮಾಡುವ ಈ ಸಂಸ್ಥೆಯು, ಚಿತ್ರಕಥೆಗೆ ಅನುಗುಣವಾಗಿ ಎಂತಹ ಕಲಾವಿದರು ಬೇಕೋ, ಅಂಥವರನ್ನು ಆಯ್ಕೆ ಮಾಡಿಕೊಡುವ ಕೆಲಸವನ್ನು ಮಾಡುತ್ತದಂತೆ. ಪ್ರತಿಷ್ಠಿತ ಸ್ಟುಡಿಯೋವೊಂದರ ದೊಡ್ಡ ಚಿತ್ರಕ್ಕೆ ಆಲಿಯಾ ಹೆಸರನ್ನು ಈ ಸಂಸ್ಥೆಯು ಪ್ರಸ್ತಾಪಿಸಿದ್ದು, ಆಕೆಗೂ ಚಿತ್ರದಲ್ಲಿ ನಟಿಸುವ ಆಸಕ್ತಿ ಉಂಟಾಗಿದೆ ಎಂದು ಹೇಳಲಾಗುತ್ತಿದೆ. -ಏಜೆನ್ಸೀಸ್