ಶಿವರಾತ್ರಿ ಪ್ರಯುಕ್ತ ಹಣೆಗೆ ವಿಭೂತಿ ಧರಿಸಿ ಕಂಗೊಳಿಸಿದ ಆಲಿಯಾ

Alia Bhatt
Alia Bhatt
Published on

ಮುಂಬೈ: ಬಾಲಿವುಡ್​ನ ಲವಲವಿಕೆಯ ನಟಿ ಆಲಿಯಾ ಭಟ್ ಸದಾ ದೈವ ಭಕ್ತೆ. ಸಮಯ ಸಿಕ್ಕಾಗ ದೇವಸ್ಥಾನಗಳಿಗೆ ತೆರಳಿ ಪೂಜೆ, ಪ್ರಾರ್ಥನೆ ಮಾಡುತ್ತಿರುತ್ತಾರೆ.

ಶಿವರಾತ್ರಿ ಪ್ರಯುಕ್ತ ಗುರುವಾರ ಆಲಿಯಾ ಮುಂಬೈನ ಜುಹುವಿನಲ್ಲಿರುವ ಮುಕ್ತೆಶ್ವರ ದೇವಸ್ಥಾನಕ್ಕೆ ತೆರಳಿ ಶಿವ ದರ್ಶನ ಪಡೆದಿದ್ದಾಳೆ. ಇದರಲ್ಲಿ ವಿಶೇಷ ಏನಂದರೆ ಕೆಂಪು ಚೂಡಿದಾರದಲ್ಲಿ ಆಲಿಯಾ ಹಣೆಗೆ ವಿಭೂತಿ ಧರಿಸಿ ಸಂಪ್ರದಾಯದ ಶೈಲಿಯಲ್ಲಿ ಭರ್ಜರಿಯಾಗಿ ಮಿಂಚಿದ್ದಾರೆ. ಈ ವೇಳೆ ಆಲಿಯಾಗೆ ಅವಳ ಗೆಳೆಯ ಆಯಾನ್ ಮುಖರ್ಜಿ ಸಾಥ್ ಕೊಟ್ಟಿದ್ದಾರೆ.

ಈ ವೇಳೆ ಎದುರಾದ ಪತ್ರಕರ್ತರು ಆಲಿಯಾಗೆ ಶಿವನ ಬಳಿ ಏನು ಪ್ರಾರ್ಥಿಸಿದಿರಿ ಎಂದು ಕೇಳಿದ್ದಾರೆ, ಇದಕ್ಕೆ ನಯವಾಗಿ ಉತ್ತರಿಸಿದ ಆಲಿಯಾ, ನಾನು ಪ್ರಾರ್ಥಿಸಿದೆ. ಆದರೆ ನಿಮ್ಮೆದುರು ಹೇಳುವುದಿಲ್ಲ ಎಂದು ಹೇಳಿದ್ದಾರೆ.

ಗಂಗೂಬಾಯಿ ಕಾಥೆವಾಡಿ ಸಿನಿಮಾದ ಚಿತ್ರೀಕರಣದಲ್ಲಿರುವ ಆಲಿಯಾ, ಕೋವಿಡ್ 19 ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಅದು ನೆಗಟಿವ್ ಬಂದಿದೆ. ಏಕೆಂದರೆ ಚಿತ್ರ ತಂಡದಲ್ಲಿರುವ ರಣಬೀರ್ ಕಪೂರ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೂ ಕೋವಿಡ್ 19 ಸೋಂಕು ತಗುಲಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net