ನಿರ್ಮಾಪಕಿಯಾಗಿ ಬಡ್ತಿ ಪಡೆದ ಚೆಲುವೆ ಆಲಿಯಾ ಭಟ್: ಮೊದಲ ಸಿನಿಮಾ ಯಾವುದು ಗೊತ್ತಾ?

Alia Bhatt - Final
Alia Bhatt
Published on

ಮುಂಬೈ: ಬಾಲಿವುಡ್​ನ ಲವಲವಿಕೆಯ ನಟಿ, 27 ರ ಚೆಲುವೆ ಆಲಿಯಾ ಭಟ್ ಇಷ್ಟು ದಿನ ಅನೇಕ ಸಿನಿಮಾಗಳನ್ನು ಮಾಡಿಕೊಂಡು ಬಂದಿದ್ದಾರೆ. ಆ ಮೂಲಕ ಅವರು ಬಾಲಿವುಡ್​ನಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಹೌದು ಆಲಿಯಾ ಭಟ್ ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಂಡಿರುವ ಆಲಿಯಾ ಚಿತ್ರ ನಿರ್ಮಾಪಕಿಯಾಗಿ ಬಡ್ತಿ ಹೊಂದಿದ್ದಾರೆ. ಈ ವಿಷಯವನ್ನು ಸ್ವತಃ ಆಲಿಯಾಳೇ ತನ್ನ ಇನ್ಸ್ಟಾಗ್ರಾಮ್​ನಲ್ಲಿ ಹಾಕಿಕೊಂಡಿದ್ದಾರೆ.

ಶಾರುಕ್ ಖಾನ್ ಅವರ ರೆಡ್ ಚಿಲ್ಲಿ ಎಂಟರಟೈನ್​ಮೆಂಟ್ ಜೊತೆ Eternal Sunshine Productions ಎಂಬ ನಿರ್ಮಾಣ ಕಂಪನಿಯನ್ನು ಆಲಿಯಾ ಪ್ರಾರಂಭಿಸಿದ್ದಾರೆ. ಈ ನಿರ್ಮಾಣ ಸಂಸ್ಥೆಯಿಂದ ಆಲಿಯಾ ಡಾರ್ಲಿಂಗ್ಸ್​ ಎನ್ನುವ ಮೊದಲ ಸಿನಿಮಾ ಆರಂಭಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಆಲಿಯಾನೇ ಇರಲಿದ್ದು ಜೊತೆಗೆ ಶೇಪಾಲಿ ಶಾ, ರೋಶನ್ ಮ್ಯಾಥೋ ಹಾಗೂ ವಿಜಯ್ ವರ್ಮಾ ಅವರು ಇರಲಿದ್ದಾರೆ ಎಂದು ಆಲಿಯಾ ತಿಳಿಸಿದ್ದಾರೆ.

ನಟಿ ಸೋನಿ ರಾಜ್ದಾನ್ ಹಾಗೂ ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಅವರ ಮಗಳಾಗಿರುವ ಆಲಿಯಾ, ಸದ್ಯ ಬಾಲಿವುಡ್​ನಲ್ಲಿ ಹೆಚ್ಚು ಬಿಜಿಯಾಗಿರುವ ನಟಿಯಾಗಿದ್ದಾರೆ. ಬ್ರಹ್ಮಾಸ್ತ್ರ, ಗಂಗೂ ಬಾಯಿ ಕಾಥೇವಾಡಿ ಹಾಗೂ ಆರ್​ಆರ್​ಆರ್​ ಎಂಬ ಮೂರು ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net