ಹೈದರಾಬಾದ್​ನಲ್ಲಿ ಆರ್​ಆರ್​ಆರ್ ಶೂಟಿಂಗ್; ಶೀಘ್ರವೇ ತಂಡ ಸೇರಿಕೊಳ್ಳಲಿದ್ದಾರೆ ಆಲಿಯಾ

Alia-RRR
Published on

ಹೈದರಾಬಾದ್​: ‘ಆರ್​ಆರ್​ಆರ್​’ ಚಿತ್ರದಲ್ಲಿ ರಾಮ್​ಚರಣ್​ ತೇಜ ಎದುರು ಆಲಿಯಾ ಭಟ್​ ನಾಯಕಿಯಾಗಿ ನಟಿಸಬೇಕಿದ್ದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಚಿತ್ರ ಪ್ರಾರಂಭವಾದ ಹೊಸದರಲ್ಲೇ, ಆಲಿಯಾ ನಾಯಕಿಯಾಗಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಅದರಂತೆ ಇದೀಗ ‘ಆರ್​​ಆರ್​ಆರ್​’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಆಲಿಯಾ ಭಟ್​ ಸಹ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ‘ಆರ್​ಆರ್​ಆರ್​’ ಚಿತ್ರದಲ್ಲಿ ಆಲಿಯಾ ಬಹಳ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಅವರ ಅಭಿನಯದ ಬಹುತೇಕ ಭಾಗದ ಚಿತ್ರೀಕರಣ ಮುಗಿದಿದೆಯಂತೆ. ಇನ್ನು ಒಂದು ದೊಡ್ಡ ದೃಶ್ಯದ ಚಿತ್ರೀಕರಣ ಮುಗಿದರೆ, ಆಲಿಯಾ ಭಾಗದ ಚಿತ್ರೀಕರಣವೇ ಮುಕ್ತಾಯವಾಗುತ್ತದಂತೆ. ಈ ಹಿನ್ನೆಲೆಯಲ್ಲಿ ನವೆಂಬರ್​ನಲ್ಲಿ ಆಲಿಯಾ ಡೇಟ್ಸ್​ ಕೊಟ್ಟಿದ್ದರು. ಆದರೆ, ಅದು ಮತ್ತೆ ಡಿಸೆಂಬರ್​ಗೆ ಮುಂದೂಡಲಾಗಿತ್ತು. ಇದೀಗ ಆಲಿಯಾ ಮತ್ತೆ ತಂಡವನ್ನು ಸೇರಿಕೊಳ್ಳಲು ತಯಾರಿ ನಡೆಸಿದ್ದಾರೆ.

ಹೈದರಾಬಾದ್​ನಲ್ಲಿ ಶೂಟಿಂಗ್​ ಶುರುವಾಗಿದ್ದು, ಇನ್ನೇನು ತಂಡ ಸೇರಿಕೊಳ್ಳಲಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ಸೀತಾ ಪಾತ್ರವನ್ನು ಆಲಿಯಾ ಭಟ್ ನಿಭಾಯಿಸುತ್ತಿದ್ದು, ರಾಮ್​ ಚರಣ್​ಗೆ ಜೋಡಿಯಾಗಿದ್ದಾರೆ. ಅಜಯ್​ ದೇವಗನ್​ ಸಹ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net