More

    50 ರೂ ಸಂಭಾವನೆ ಪಡೆಯುತ್ತಿದ್ದ ಶಾರುಖ್​ ಖಾನ್ ಕಡೆಯಿರುವ ಈ ನಾಲ್ಕು ಪ್ರಾಪರ್ಟಿ ಬೆಲೆ ಈಗ ಸಾವಿರ ಕೋಟಿ!?

    ಮುಂಬೈ: ಬಾಲಿವುಡ್​ ಬಾದ್ಶಾ ಕಳೆದ ಎರಡು ವರ್ಷಗಳಿಂದ ತೆರೆಮೇಲೆ ಕಾಣಿಸಿಕೊಂಡಿಲ್ಲ. ಹಾಗಂತ ಸಿನಿಮಾದಿಂದ ಅವರೇನು ದೂರ ಉಳಿದಿಲ್ಲ. ತೆರೆ ಹಿಂದೆ ಸಿನಿಮಾ ನಿರ್ಮಾಣ ಸೇರಿ ಪ್ರೊಡಕ್ಷನ್ಸ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಒಪ್ಪಿಕೊಂಡಿರುವ ಪಠಾಣ್​ ಚಿತ್ರದ ಶೂಟಿಂಗ್​ನಲ್ಲಿಯೂ ಅವರು ಭಾಗವಹಿಸಿದ್ದಾರೆ. ಇದೀಗ ಇದರ ಆಚೆಗೆ ಚೂರ ಕಣ್ಣಾಡಿಸಿದರೆ, ಶಾರುಖ್​ ಖಾನ್​ ಆಸ್ತಿ ಎಷ್ಟಿರಬಹುದು? ಎಂಬ ಆಲೋಚನೆ ಏನಾದರೂ ಬಂದರೆ, ಅವರ ಬಳಿ ಇರುವ ಕೇವಲ ನಾಲ್ಕೇ ನಾಲ್ಕು ಪ್ರಾಪರ್ಟಿ 1000 ಕೋಟಿಗೂ ಅಧಿಕ ಬೆಲೆ ಬಾಳುತ್ತವೆ!

    ಇದನ್ನೂ ಓದಿ: ‘ಎಲ್ಲಿಂದ ಶುರು ಮಾಡಲಿ?’ ಎಂದು ಕೇಳಿದ್ದಾರೆ ನಟಿ ಸನ್ನಿ ಲಿಯೋನ್​; ಯಾಕಿರಬಹುದು?

    ಹೌದು, ಆರಂಭದ ದಿನಗಳಲ್ಲಿ ಶಾರುಖ್​ ಖಾನ್ ತಮ್ಮ ಮೊದಲ ಸಂಭಾವನೆಯ ರೂಪದಲ್ಲಿ ಕೇವಲ 50ರೂ ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಈಗಾಗಲೇ ಶಾರುಖ್​ ಖಾನ್​ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಇದೀಗ ಕಾಲ ಬದಲಾಗಿದೆ. ಶಾರುಖ್​ ಕಡೆಯಿರುವ ಕೇವಲ ನಾಲ್ಕೇ ನಾಲ್ಕು ಪ್ರಾಪರ್ಟಿಯ ಬೆಲೆಯೇ ಸಾವಿರ ಕೋಟಿಗೂ ಅಧಿಕ.

    ಇದನ್ನೂ ಓದಿ: ವಿಷ ಕಾರೋದು ಕಂಗನಾಗೆ ಅಭ್ಯಾಸವಾಗಿಬಿಟ್ಟಿದೆ: ಸ್ವರಾ ಭಾಸ್ಕರ್​

    1. ಮುಂಬೈನಲ್ಲಿರುವ ಮನ್ನತ್: ಮನೆ 2001 ರಲ್ಲಿ ಮುಂಬೈನ ಬಾಂಧ್ರಾದಲ್ಲಿನ ಮನ್ನತ್​ ಬಂಗಲೆಯನ್ನು ಶಾರುಖ್​ ಖಾನ್​ ಖರೀದಿಸಿದ್ದರು. ಇದೀಗ ಆ ಮನೆಯ ಒಟ್ಟು ಮೌಲ್ಯ ಬರೋಬ್ಬರಿ 200 ಕೋಟಿ! ಆರಂಭದಲ್ಲಿ ವಿಲ್ಲಾ ವಿಯೇನಾ ಎಂಬ ಹೆಸರಿನ ಈ ಮನೆಯನ್ನು ಮನ್ನತ್ ಎಂದು ಶಾರುಖ್​ ಬದಲಿಸಿದ್ದರು.

    2. ಲಂಡನ್​ನಲ್ಲಿರುವ ಐಷಾರಾಮಿ ಮನೆ: ಮುಂಬೈ ಸೇರಿ ಹಲವೆಡೆ ಮನೆಗಳನ್ನು ಹೊಂದಿರುವ ಶಾರುಖ್​ ಖಾನ್​ ಲಂಡನ್​ನಲ್ಲೂ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಲಂಡನ್​ನ ದುಬಾರಿ ಪ್ರದೇಶದಲ್ಲಿ 200 ಕೋಟಿ ಬೆಲೆ ಬಾಳುವ ಮನೆಯನ್ನು ಶಾರುಖ್​ ಹೊಂದಿದ್ದಾರೆ.

    3. ರೆಡ್​ ಚಿಲ್ಲೀಸ್ ಪ್ರೊಡಕ್ಷನ್ ಹೌಸ್: ಇನ್ನು ನಿರ್ಮಾಣ ಸಂಸ್ಥೆಯ ಮೌಲ್ಯವೂ ಅಷ್ಟೇ ದೊಡ್ಡ ಮಟ್ಟದಲ್ಲಿದೆ. 2002ರಲ್ಲಿ ಆರಂಭಿಸಿದ ರೆಡ್ ಚಿಲ್ಲೀಸ್ ಎಂಟರ್​ಟೈನ್​ಮೆಂಟ್​ ಸಂಸ್ಥೆ ಇದೀಗ ಏನಿಲ್ಲ ಅಂದರೂ 500 ಕೋಟಿಗೆ ಬೆಲಬಾಳುತ್ತದೆ.

    4. ಕೋಲ್ಕತ್ತ ನೈಟ್ ರೈಡರ್​ ತಂಡ: ಸಿನಿಮಾದ ಜತೆಗೆ ಕ್ರಿಕೆಟ್ನನಲ್ಲೂ ಆಸಕ್ತಿ ಹೊಂದಿರುವ ಶಾರುಖ್​, ಐಪಿಎಲ್​ನಲ್ಲಿ ಕೋಲ್ಕತ್ತ ನೈಟ್ ರೈಡರ್​ನ ಮಾಲೀಕರಾಗಿದ್ದಾರೆ. ಇದರಲ್ಲಿ ಶೇ. 55 ರಷ್ಟು ಶೇರುಗಳು ಶಾರುಖ್​ ಹೆಸರಿನಲ್ಲಿವೆ. 2019ರಲ್ಲಿಯೇ ಈ ತಂಡದ ಒಟ್ಟು ಮೌಲ್ಯ 630 ಕೋಟಿ.

    ಆಚಾರ್ಯ ರಾಮ್​ಚರಣ್​ಗೆ ಕಿಯಾರಾನಾ ರಶ್ಮಿಕಾನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts