ಆಚಾರ್ಯ ರಾಮ್​ಚರಣ್​ಗೆ ಕಿಯಾರಾನಾ ರಶ್ಮಿಕಾನಾ?

thumb
Published on

ಹೈದರಾಬಾದ್: ಈಗಾಗಲೇ ‘ಮೆಗಾ ಸ್ಟಾರ್’ ಚಿರಂಜೀವಿ ನಾಯಕತ್ವದ ‘ಆಚಾರ್ಯ’ ಶೂಟಿಂಗ್​ಗೂ ಮುನ್ನವೇ ಬಾರೀ ಸುದ್ದಿಯಲ್ಲಿದೆ. ಚಿರಂಜೀವಿಗೆ ನಾಯಕಿ ಯಾರು ಎಂಬ ವಿಚಾರಕ್ಕೆ ಸದ್ದು ಮಾಡಿದ್ದ ಈ ಸಿನಿಮಾ, ಇದೀಗ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಾಮಚರಣ್​ಗೂ ನಾಯಕಿ ಯಾರು ಎಂಬ ವಿಚಾರಕ್ಕೆ ಸದ್ದು ಮಾಡುತ್ತಿದೆ.

ಈಗಾಗಲೇ ನಿರ್ದೇಶಕರು ಹುಡುಕಾಟ ನಡೆಸಿದ್ದು, ಇಬ್ಬರು ಟಾಪ್ ನಟಿಯರ ಮೇಲೆ ಕಣ್ಣಿಟ್ಟಿದ್ದಾರೆ. ಆ ಇಬ್ಬರಲ್ಲಿ ಯಾರು ಆಯ್ಕೆ ಆಗುತ್ತಾರೆ ಎಂಬುದೇ ಅಚ್ಚರಿಯ ಪ್ರಶ್ನೆ. ಹೌದು, ‘ಆಚಾರ್ಯ’ ಚಿತ್ರದಲ್ಲಿ ರಾಮಚರಣ್​ಗೆ ಜೋಡಿಯಾಗಿ ಕೀರ್ತಿ ಸುರೇಶ್ ಅಥವಾ ಕಿಯಾರಾ ಅಡ್ವಾಣಿ ಇಬ್ಬರಲ್ಲಿ ಒಬ್ಬರು ನಾಯಕಿಯಾಗುವ ಸಾಧ್ಯತೆ ಎನ್ನಲಾಗಿತ್ತು. ಅಷ್ಟೇ ಅಲ್ಲ ರಶ್ಮಿಕಾ ಮಂದಣ್ಣ ಹೆಸರೂ ತಳುಕು ಹಾಕಿಕೊಂಡಿತ್ತು.

ಇದೀಗ ಈ ಇಬ್ಬರಲ್ಲಿ ಕಿಯಾರಾ ಅಡ್ವಾಣಿ ನಟಿಸುವುದು ಅಧಿಕೃತ ಎಂದೇ ಹೇಳಲಾಗುತ್ತಿದೆ. ಬಹುಭಾಷೆಯಲ್ಲಿ ಈ ಸಿನಿಮಾ ತೆರೆಗೆ ಬರಲಿರುವುದರಿಂದ ಹಿಂದಿ ಭಾಷಿಕರನ್ನು ಸೆಳೆಯಲು ಕಿಯಾರಾ ಅವರನ್ನು ತಂಡ ಆಯ್ದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನಷ್ಟೇ ಈ ಬಗ್ಗೆ ತಂಡವೇ ಅಧಿಕೃತವಾಗಿ ಘೋಷಣೆ ಮಾಡಿಕೊಳ್ಳಬೇಕಿದೆ. ಕಿಯಾರಾನಾ ರಶ್ಮಿಕಾನಾ ಎಂಬುದು ಗೊತ್ತಾಗಬೇಕಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net