ಸಿನಿಮಾ

ರಾಮ್​ಚರಣ್​ ಪತ್ನಿ ಜತೆ ಆಡಿ ಕಾರಲ್ಲಿ ಗೋವಾಗೆ ಹೋಗಿದ್ದೆ ಎಂದವನಿಗೆ ಬಿತ್ತು ಧರ್ಮದೇಟು!

ಹೈದರಾಬಾದ್​: ರಾಜಮೌಳಿ ನಿರ್ದೇಶನದ ಮಗಧೀರ ಸಿನಿಮಾ ಯಶಸ್ಸಿನ ಮೂಲಕ ನಟ ರಾಮ್​ಚರಣ್​ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ತುಂಬಾ ಖ್ಯಾತಿ ಪಡೆದರು. ಕಳೆದ ವರ್ಷ ಮಾರ್ಚ್​ ತಿಂಗಳಲ್ಲಿ ಬಿಡುಗಡೆಯಾದ ಆರ್​ಆರ್​ಆರ್​ ಸಿನಿಮಾ ಯಶಸ್ಸಿನ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಬಹುತೇಕ ನೆಟ್ಟಿಗರಿಗೆ ರಾಮ್​ಚರಣ್​ ಅವರ ಪತ್ನಿ ಉಪಾಸನ ಕಮಿನೇನಿ ಅವರ ಪರಿಚಯವೂ ಇದೆ. ಇಬ್ಬರು 2012ರಲ್ಲಿ ಮದುವೆ ಆದರು. ಇಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲೂ ಇದ್ದಾರೆ. ಇದರ ನಡುವೆ ರಾಮ್​ಚರಣ್​ ಮತ್ತು ಅವರ ಪತ್ನಿಯ ಬಗ್ಗೆ ಮಾತನಾಡಿರುವ ಇತ್ತೀಚಿನ ವಿವಾದಾತ್ಮಕ ಸಂದರ್ಶನವೊಂದು ವೈರಲ್​ ಆಗಿದೆ.

ಇದನ್ನೂ ಓದಿ: ಆಟೋ ರಿಕ್ಷಾಕ್ಕೆ ಡಿಕ್ಕಿಯಾದ ನಿಂಬೆಹಣ್ಣು ತುಂಬಿದ ಟ್ರಕ್; 6 ಮಹಿಳಾ ಕಾರ್ಮಿಕರು ಮೃತ್ಯು, 6 ಮಂದಿ ಗಂಭೀರ

ಸುನಿಸಿತ್ ಎಂಬ ವ್ಯಕ್ತಿ ಮಾಧ್ಯಮ ಸಂದರ್ಶನವೊಂದರಲ್ಲಿ ರಾಮ್​ಚರಣ್​ ಮತ್ತು ಉಪಾಸನ ಇಬ್ಬರು ನನಗೆ ಫ್ರೆಂಡ್ಸ್​ ಎಂದು ಹೇಳಿಕೊಂಡಿದ್ದಾರೆ. ಅದರಲ್ಲೂ ಉಪಾಸನ ಬಗ್ಗೆ ಮಾತನಾಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಲ್ಲದೆ, ರಾಮ್​ಚರಣ್​ ಅಭಿಮಾನಿಗಳಿಂದ ಧರ್ಮದೇಟು ತಿಂದಿದ್ದಾನೆ.

ಉಪಾಸನ ನನ್ನ ಸ್ನೇಹಿತೆ ಮತ್ತು ಆಕೆಯ ಆಡಿ ಕಾರಿನಲ್ಲಿ ನಾವಿಬ್ಬರು ಗೋವಾ ಪ್ರವಾಸ ಮಾಡಿದ್ದೇವೆ ಎಂದಿದ್ದಾನೆ. ಅಲ್ಲದೆ, ಉಪಾಸನಾ ಅವರನ್ನು ಪ್ರೀತಿಸಲು ಸಹಾಯ ಮಾಡಬಹುದೇ ಎಂದು ರಾಮಚರಣ್ ನನ್ನನ್ನು ಕೇಳಿದ್ದರು ಎಂದು ಹೇಳಿಕೊಂಡಿದ್ದಾನೆ. ಸುನಿಸಿತ್ ನೀಡಿರುವ ಸಂದರ್ಶನದ ವಿಡಿಯೋ ವೈರಲ್​ ಆಗಿದ್ದು, ಆತ ವಾಸವಿರುವ ಫ್ಲ್ಯಾಟ್​ನ ಹೊರಭಾಗದಲ್ಲಿ ರಾಮ್​ಚರಣ್​ ಅಭಿಮಾನಿಗಳು ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಥಳಿಸಿದ್ದಲ್ಲದೆ ಮಾಧ್ಯಮಗಳ ಮುಂದೆ ಕ್ಷಮೆಯಾಚಿಸುವಂತೆ ಮಾಡಿದ್ದಾರೆ. ಇನ್ನು ಮುಂದೆ ಈ ರೀತಿ ಮಾತನಾಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಸದ್ಯ ಸುನಿಸಿತ್​ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

ಅನಗತ್ಯ ಟೀಕೆಗಳಿಗೆ ಪ್ರತಿಕ್ರಿಯಿಸಲ್ಲ: ಶಾಸಕ ನೇಮಿರಾಜ ನಾಯ್ಕ ಹೇಳಿಕೆ

ವಿಜಯನಗರ ಜಿಲ್ಲೆಗೆ ಸಿಗುವುದೇ ಮಂತ್ರಿ ಪಟ್ಟ ?: ಎರಡು ಬಾರಿ ಗೆದ್ದ ಗವಿಯಪ್ಪ ಪ್ರಬಲ ಆಕಾಂಕ್ಷಿ

ಸಿಎಂ ಆಯ್ಕೆಯಲ್ಲಿ ಬಿಗ್​​ ಟ್ವಿಸ್ಟ್​; ಮುಂದಿನ ಮುಖ್ಯಮಂತ್ರಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ ಎಂದ ಸುರ್ಜೇವಾಲ

Latest Posts

ಲೈಫ್‌ಸ್ಟೈಲ್