More

    ಅನಗತ್ಯ ಟೀಕೆಗಳಿಗೆ ಪ್ರತಿಕ್ರಿಯಿಸಲ್ಲ: ಶಾಸಕ ನೇಮಿರಾಜ ನಾಯ್ಕ ಹೇಳಿಕೆ

    ಹಗರಿಬೊಮ್ಮನಹಳ್ಳಿ: ವಿವಾದಿತ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ ಕಾಲಹರಣ ಮಾಡುವ ಬದಲು ಕ್ಷೇತ್ರದಲ್ಲಿ ಜನರೊಂದಿಗೆ ಇದ್ದು ಕೆಲಸ ಮಾಡುವ ಮೂಲಕ ಟೀಕಾಕಾರರಿಗೆ ಉತ್ತರ ನೀಡುತ್ತೇನೆ ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.

    1001 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿ

    ಪಟ್ಟಣದ ಹಗರಿ ಆಂಜನೇಯ ದೇವಸ್ಥಾನದಲ್ಲಿ ದೇಗುಲದಲ್ಲಿ ಅಭಿಮಾನಿ ಸುರೇಶ್ 1001 ತೆಂಗಿನಕಾಯಿ ಒಡೆದು ಹರಕೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಂಗಳವಾರ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು. ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಅನಗತ್ಯ ಟೀಕೆಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ.

    ಇದನ್ನೂ ಓದಿ:ಶಾಸಕ ಭೀಮಾನಾಯ್ಕ ವರ್ತನೆ ಖಂಡಿಸಿ ನ.11ಕ್ಕೆ ಹಗರಿಬೊಮ್ಮನಹಳ್ಳಿ ಬಂದ್: ಮಾಜಿ ಎಂಎಲ್‌ಎ ನೇಮಿರಾಜ ನಾಯ್ಕ ಹೇಳಿಕೆ

    ನಿಮ್ಮೂರಿನ ಸಮಸ್ಯೆ ಹೇಳಿದರೆ ಪರಿಹಾರಕ್ಕೆ ಶ್ರಮಿಸುತ್ತೇನೆ

    ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನರು ಪಕ್ಷಾತೀತ, ಜಾತ್ಯತೀತ, ಧರ್ಮಾತೀತವಾಗಿ ಬೆಂಬಲಿಸಿ ಜಯ ನೀಡಿದ್ದಾರೆ. ಇನ್ಮುಂದೆ ಎಲ್ಲ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹರಿಸುವ ಕ್ರಮ ವಹಿಸುವೆ. ಶೀಘ್ರವೇ ಅಧಿಕಾರಿಗಳ ಸಭೆ ಕರೆದು ಕ್ಷೇತ್ರದಲ್ಲಿನ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಗುವುದು. ಹಳ್ಳಿಗಳಿಗೆ ಭೇಟಿ ನೀಡಿದಾಗ ಹಾರ, ಶಾಲು, ಉಡುಗೊರೆ, ಡೊಳ್ಳು, ಪಟಾಕಿಗಳಿಗೆ ಹಣ ವ್ಯಯ ಮಾಡದೆ ನಿಮ್ಮೂರಿನ ಸಮಸ್ಯೆ ಹೇಳಿದರೆ ಪರಿಹಾರಕ್ಕೆ ಶ್ರಮಿಸುತ್ತೇನೆ ಎಂದು ತಿಳಿಸಿದರು.


    ಪುರಸಭೆ ಸದಸ್ಯರಾದ ಬಿ.ಗಂಗಾಧರ, ಭೋವಿ ವೀರೇಶ್, ಮಾಜಿ ಸದಸ್ಯ ಲಕ್ಷ್ಮಣ ಕಲಾಲ್, ತಾಪಂ ಮಾಜಿ ಸದಸ್ಯ ತಿಪ್ಪೇರುದ್ರಮುನಿ, ಮುಖಂಡರಾದ ವಿ.ತಿರುಮಲೇಶ್, ಯು.ಕೆ.ಕೊಟ್ರೇಶ್, ಚಿತವಾಡ್ಗಿ ಪ್ರಕಾಶ್, ಭೋವಿ ಬಸವರಾಜ, ಸಿ.ಎಚ್.ಸಿದ್ದರಾಜು, ಬ್ಯಾಟಿ ನಾಗರಾಜ, ಕೊಟ್ರೇಶ್, ಅರುಣ್ ಕುಮಾರ್, ತಿಪ್ಪೇಸ್ವಾಮಿ, ಬಿ.ಡಿ.ಕೆ.ಮಂಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts