ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಆಲಿಯಾ ಭಟ್​: ರಣಬೀರ್​ ಕಪೂರ್​ ಕುಟುಂಬಕ್ಕೆ ಮಹಾಲಕ್ಷ್ಮೀಯ ಆಗಮನ

Alia
Published on

ಮುಂಬೈ: ಬಾಲಿವುಡ್​ ನಟಿ ಆಲಿಯಾ ಭಟ್​ ಇಂದು (ನ.06) ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಟ ರಣಬೀರ್​ ಕಪೂರ್​ ತಂದೆಯಾಗಿ ಬಡ್ತಿ ಪಡೆದಿದ್ದಾರೆ.

ಇಂದು ಬೆಳಗ್ಗೆ 7 ಗಂಟೆಗೆ ಹೆರಿಗೆಗೆಂದು ಆಲಿಯಾ ಭಟ್​, ಮುಂಬೈನಲ್ಲಿರುವ ಎಚ್​.ಎನ್​. ರಿಲಯನ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನ 12.05ರ ಸಮಯಕ್ಕೆ ಮಗು ಜನಿಸಿದೆ. ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆಲಿಯಾ ಭಟ್​ ಆಸ್ಪತ್ರೆಗೆ ದಾಖಲಾಗುವಾಗ ಪತಿ ರಣಬೀರ್​ ಕಪೂರ್​ ಸಹ ಜೊತೆಯಲ್ಲಿಯೇ ಆಮಿಸಿದ್ದರು ಎಂದು ತಿಳಿದುಬಂದಿದೆ.

ಈ ವರ್ಷದ ಏಪ್ರಿಲ್​ನಲ್ಲಿ ಆಲಿಯಾ ಮತ್ತು ರಣಬೀರ್​ ಇಬ್ಬರು ಮದುವೆ ಆದರು. ಜೂನ್​ ತಿಂಗಳಲ್ಲಿ ಆಲಿಯಾ, ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ಇನ್​ಸ್ಟಾಗ್ರಾಂ ಖಾತೆಯ ಮೂಲಕ ತಿಳಿಸಿದರು. ಕಳೆದ ತಿಂಗಳು ಮುಂಬೈನಲ್ಲಿರುವ ಆಲಿಯಾ ಮತ್ತು ರಣಬೀರ್ ಅವರ​ ಮನೆಯಲ್ಲಿ ಫ್ರೆಂಡ್ಸ್​ ಎಲ್ಲ ಸೇರಿ ಸೀಮಂತ ಕಾರ್ಯಕ್ರಮ ನಡೆಸಿದರು. ಇದೀಗ ಹೆಣ್ಣು ಮಗುವಿಗೆ ಆಲಿಯಾ ಜನ್ಮ ನೀಡಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net