ಪ್ರೖೆಮ್​ನಲ್ಲಿ ಅಕ್ಷಯ್​ ಕುಮಾರ್ ಅಭಿನಯದ ಬೆಲ್ ಬಾಟಂ

Bell Bottom
Published on

ವಿಮುಖರಾಗಿರುವ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳತ್ತ ‘ಬೆಲ್ ಬಾಟಂ’ ಕರೆದುಕೊಂಡು ಬರಲಿದೆ ಎಂದೇ ಚಿತ್ರರಂಗದವರು ನಂಬಿದ್ದರು. ಜನರನ್ನು ಸೆಳೆಯುವುದಕ್ಕೆ ಅಕ್ಷಯ್ ಕುಮಾರ್ ಒಬ್ಬರಿಂದ ಮಾತ್ರ ಸಾಧ್ಯ ಎಂದು ಕೊಂಡಾಡಿದ್ದರು. ಆದರೆ, ಆ ನಿರೀಕ್ಷೆ ಸುಳ್ಳಾಗಿದೆ. ಚಿತ್ರವೇನೋ ಆಗಸ್ಟ್ 19ರಂದು ಬಿಡುಗಡೆಯಾಯಿತು. ಆದರೆ, ಜನ ಬರಲಿಲ್ಲ, ಕಲೆಕ್ಷನ್ ಅಂತೂ ಕೇಳಲೇಬೇಡಿ. ಈಗ ಆ ಚಿತ್ರ ಅಮೆಜಾನ್ ಪ್ರೖೆಮ್ಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಸೆಪ್ಟೆಂಬರ್ 16ರ ಗುರುವಾರದಿಂದ ಸ್ಟ್ರೀಮ್ ಆಗಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 15 ದಿನಗಳಲ್ಲೇ ಒಟಿಟಿಯಲ್ಲಿ ‘ಬೆಲ್ ಬಾಟಂ’ ಬಿಡುಗಡೆಯಾಗಲಿದೆ ಎಂದು ಮೊದಲೇ ಸುದ್ದಿಯಾಗಿತ್ತು. ಇದನ್ನು ಕೇಳಿ ಚಿತ್ರಮಂದಿರದವರು ಸಿಟ್ಟಾಗಿದ್ದರು.

ಒಟಿಟಿಯಲ್ಲಿ ಇಂಥ ದಿನ ಬಿಡುಗಡೆಯಾಗುತ್ತದೆ ಎಂದು ಮೊದಲೇ ಘೋಷಿಸಿಬಿಟ್ಟರೆ, ಜನ ಹೇಗೆ ಚಿತ್ರಮಂದಿರದತ್ತ ಬರುತ್ತಾರೆ ಎಂದು ಪ್ರಶ್ನಿಸಿದ್ದರು. ಘೋಷಣೆ ಹಿಂದಕ್ಕೆ ಪಡೆಯದಿದ್ದರೆ, ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಕೊನೆಗೆ ಚಿತ್ರಮಂದಿರದವರ ಬೆದರಿಕೆಗೆ ಬಗ್ಗಿ, ಚಿತ್ರತಂಡದವರು ಒಟಿಟಿಯಲ್ಲಿ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದರು. ಇದೀಗ ಚಿತ್ರಮಂದಿರಗಳಿಂದ ಚಿತ್ರ ಬಹುತೇಕ ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ, ಒಟಿಟಿ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. 1984ರಲ್ಲಿ ನಡೆದ ಪ್ಲೇನ್ ಹೈಜಾಕ್ ಪ್ರಕರಣವನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net